* ಮ್ಯಾಕಿನ್ ಹೆಲ್ತ್ ಇನ್‌ಸ್ಟಿಟ್ಯೂಟ್ ನಡೆಸಿ 2023ರ ಜಾಗತಿಕ ಸಮೀಕ್ಷೆಯ ಪ್ರಕಾರ, ವಿಶ್ವದಲ್ಲೇ ಉದ್ಯೋಗಿಗಳ ಶಾರೀರಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಆರೋಗ್ಯ ಕಡೆಗೆ ಕಾಳಜಿ ವಹಿಸುವ ದೇಶಗಳ ಪಟ್ಟಿಯಲ್ಲಿ ಭಾರತ 2ನೇ ಸ್ಥಾನದಲ್ಲಿದೆ.
* ಮ್ಯಾಕಿನ್ ಹೆಲ್ತ್ ಇನ್‌ಸ್ಟಿಟ್ಯೂಟ್ ನಡೆಸಿ 2023ರ ಜಾಗತಿಕ ಸಮೀಕ್ಷೆಯ ಪಟ್ಟಿಯಲ್ಲಿ ಟರ್ಕಿ ಮೊದಲನೆಯ ಸ್ಥಾನ ಪಡೆದುಕೊಂಡಿದೆ.
* 30 ದೇಶಗಳಲ್ಲಿ ನಡೆಸಿದ 30 ದೇಶಗಳ 30 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಸಮೀಕ್ಷೆಯಲ್ಲಿ ಟರ್ಕಿ ಮೊದಲ ಸ್ಥಾನ ಪಡೆದರೆ, ಭಾರತ 2ನೇ ಸ್ಥಾನ ಪಡೆದಿದೆ. ಚೀನಾ ಮೂರನೇ ಸ್ಥಾನದಲ್ಲಿದೆ. ಸಮೀಕ್ಷೆಯಲ್ಲಿ ಭಾಗಿಯಾದ ಭಾರತೀಯರು ತಮ್ಮ ದೈಹಿಕ ಆರೋಗ್ಯವನ್ನು ಶೇ.81, ಮಾನಸಿಕ ಆರೋಗ್ಯ ಶೇ.79, ಸಾಮಾಜಿಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ಶೇ.78 ಎಂದು ನಮೂದಿಸಿದ್ದಾರೆ. ಜಪಾನ ಕೊನೆಯ ಸ್ಥಾನದಲ್ಲಿದೆ.
* ಇತ್ತೀಚಿಗೆ ಕಾರ್ಮಿಕರ ಸಂಸ್ಥೆ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ವಿಶ್ವದಲ್ಲೇ ಅತ್ಯಂತ ಕಷ್ಟಪಟ್ಟು ದುಡಿಯುವವರಲ್ಲಿ ಭಾರತ ಮೊದಲನೇ ಸ್ಥಾನದಲ್ಲಿದೆ.ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯರು ವಾರಕ್ಕೆ 47.7 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಸೋಮವಾರ, 06 ನವೆಂಬರ್ 2023
10:38 ಪೂರ್ವಾಹ್ನ
Daily PDF
ಉದ್ಯೋಗಿಗಳ ಯೋಗಕ್ಷೇಮ ಸಮೀಕ್ಷೆ : ಭಾರತಕ್ಕೆ 2ನೇ ಸ್ಥಾನ
Authored by:
Akshata Halli