* ಭಾರತ ರಷ್ಯಾದಿಂದ ತೈಲ ಖರೀದಿಸುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ರಫ್ತು ಸರಕುಗಳ ಮೇಲೆ ಹೆಚ್ಚುವರಿ ಶೇ 25ರಷ್ಟು ಸುಂಕ ಹೇರಲು ಆದೇಶಿಸಿದ್ದಾರೆ. ಇದರಿಂದ ಸುಂಕದ ಒಟ್ಟು ಪ್ರಮಾಣ ಶೇ 50ಕ್ಕೆ ಏರಲಿದೆ.
* ಈ ಕ್ರಮವನ್ನು ಭಾರತ 'ಅನ್ಯಾಯ, ಅಸಮರ್ಥನೀಯ, ಅತಾರ್ಕಿಕ' ಎಂದು ತಿರಸ್ಕರಿಸಿದೆ. ರಾಷ್ಟ್ರೀಯ ಹಿತಾಸಕ್ತಿಗಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.
* ಉಕ್ರೇನ್ ಯುದ್ಧದ ನಂತರ ರಷ್ಯಾ ರಿಯಾಯಿತಿ ದರದಲ್ಲಿ ತೈಲ ಮಾರಾಟ ಮಾಡುತ್ತಿದ್ದರಿಂದ, ಭಾರತ ತನ್ನ ಇಂಧನ ಭದ್ರತೆಗೆ ಗಮನ ನೀಡಿ ಖರೀದಿಯನ್ನು ಮುಂದುವರೆಸಿದೆ. 2021ರ ವರೆಗೆ ರಷ್ಯಾದ ಪಾಲು ಕೇವಲ ಶೇ 0.2 ಇದ್ದರೂ, ಈಗ ಅದು ಪ್ರಮುಖ ತೈಲ ಪೂರೈಕೆದಾರವಾಗಿದೆ.
* ₹7.5 ಲಕ್ಷ ಕೋಟಿ ಮೌಲ್ಯದ ರಫ್ತುಮಾಲುಗಳಿಗೆ ಈ ಸುಂಕ ತೀವ್ರ ಹೊಡೆತ ನೀಡಬಹುದು ಎಂಬ ಆತಂಕವನ್ನು ರಫ್ತುದಾರರು ವ್ಯಕ್ತಪಡಿಸಿದ್ದಾರೆ. ಜವಳಿ, ಚರ್ಮ, ಸಾಗರ ಉತ್ಪನ್ನಗಳಿಗೆ ಹೆಚ್ಚಿನ ಪರಿಣಾಮ ಬೀಳಲಿದೆ.
* ಭಾರತದ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಟ್ರಂಪ್, “ಅಮೆರಿಕ ರಷ್ಯಾದಿಂದ ರಸಗೊಬ್ಬರ ಅಥವಾ ಯುರೇನಿಯಂ ಆಮದು ಮಾಡಿಕೊಳ್ಳುತ್ತದೆಯೇ ಎಂಬುದು ನನಗೆ ಗೊತ್ತಿಲ್ಲ” ಎಂದಿದ್ದಾರೆ. ಇತರ ದೇಶಗಳ ಮೇಲೂ ಇಂಧನ ಆಮದು ಸಂಬಂಧಿತ ಕ್ರಮಗಳನ್ನು ಶೀಘ್ರವೇ ಪರಿಗಣಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಗುರುವಾರ, 07 ಆಗಸ್ಟ್ 2025
12:34 ಅಪರಾಹ್ನ
Daily PDF
ಟ್ರಂಪ್ ಆದೇಶ: ಆಮದು ಸುಂಕ ಶೇಖಡಾ 50 ಕ್ಕೆ ಏರಿಕೆ
Authored by:
Jyoti Angadi