* ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ (ವಯಸ್ಸು 79) ದೀರ್ಘಕಾಲದ ಅನಾರೋಗ್ಯದಿಂದ ಮಂಗಳವಾರ ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಮಧ್ಯಾಹ್ನ 1.10ಕ್ಕೆ ನಿಧನರಾದರು.
* ಅವರು ಆಗಸ್ಟ್ 2018 ರಿಂದ ಅಕ್ಟೋಬರ್ 2019 ರವರೆಗೆ ಜಮ್ಮು ಮತ್ತು ಕಾಶ್ಮೀರದ 10ನೇ ರಾಜ್ಯಪಾಲರಾಗಿದ್ದರು. ಅವರ ಅವಧಿಯಲ್ಲಿಯೇ ಆರ್‌ಟಿಕಲ್ 370 ರದ್ದು ಮಾಡಿ, ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಯಿತು.
* ಐದು ದಶಕಗಳ ಕಾಲ ರಾಜಕೀಯವಾಗಿ ಸಕ್ರಿಯರಾಗಿದ್ದ ಮಲಿಕ್, ತಮ್ಮ ರಾಜಕೀಯ ಜೀವನವನ್ನು ಭಾರತೀಯ ಕ್ರಾಂತಿ ದಳದಿಂದ ಆರಂಭಿಸಿದ್ದರು. ಅವರು ಬಾಗ್‌ಪತ್‌ನಿಂದ ಶಾಸಕರಾಗಿದ್ದರು ಮತ್ತು ನಂತರ ರಾಜ್ಯಸಭಾ ಸದಸ್ಯರೂ ಆದರು.
* 1989ರಲ್ಲಿ ಜನತಾ ದಳದ ಟಿಕೆಟ್‌ನಲ್ಲಿ ಅಲಿಗಢದಿಂದ ಲೋಕಸಭೆಗೆ ಆಯ್ಕೆಯಾದ ಮಲಿಕ್, 2012ರಲ್ಲಿ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದರು. ಈ ಹುದ್ದೆಗೆ 2014 ರಲ್ಲೂ ಮರುನೇಮಕಗೊಂಡರು.
* ಅವರು 2017ರಲ್ಲಿ ಬಿಹಾರದ ರಾಜ್ಯಪಾಲರಾಗಿ ನೇಮಕಗೊಂಡು, ನಂತರ ಒಡಿಶಾದ ಹೆಚ್ಚುವರಿ ಉಸ್ತುವಾರಿಯನ್ನೂ ವಹಿಸಿದ್ದರು. ತಮ್ಮ ಜೀವನದ ಕೊನೆಯ ಹಂತಗಳಲ್ಲಿ ಹಲವು ರಾಜ್ಯಪಾಲ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು.
ಜಮ್ಮು ಕಾಶ್ಮೀರದ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ನಿಧನ
Published by Jyoti Angadi
07 ಆಗಸ್ಟ್ 2025