* ಟೀಮ್ ಲೀಸ್ ಸರ್ವೀಸಸ್ ಉದ್ಯೋಗ ಮತ್ತು ವೇತನ ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡಿದ್ದು ಉದ್ಯೋಗ ಮತ್ತು ವೇತನದ ವೃದ್ಧಿಯ ವಿಷಯದಲ್ಲಿ ಇಡೀ ದೇಶದಲ್ಲೇ ಬೆಂಗಳೂರು ಪ್ರಥಮ ಸ್ಥಾನದಲ್ಲಿದೆ.
* ಟೀಮ್ ಲೀಸ್ ಸರ್ವೀಸಸ್ ಉದ್ಯೋಗ ಮತ್ತು ವೇತನ ಸಮೀಕ್ಷಾ ವರದಿಯಲ್ಲಿ ಚನ್ನೈ ಮತ್ತು ದೆಹಲಿ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ.
* ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬೆಂಗಳೂರಿನಲ್ಲಿ ಸರಾಸರಿ ವೇತನ ಹೆಚ್ಚಳ ಶೇಕಡ 9.3ರಷ್ಟಾಗಿದೆ. ಚೆನ್ನೈನಲ್ಲಿ ಇದು ಶೇ.7.5 ಮತ್ತು ದೆಹಲಿಯಲ್ಲಿ ಶೇ.7.3ರಷ್ಟಿದೆ.
* ಸರಾಸರಿ ಮಾಸಿಕ ಏಕೀಕೃತ ಸಂಬಳವು ಬೆಂಗಳೂರಿನಲ್ಲಿ 29,500 ರೂ. ಇದ್ದು, ದೇಶದ ಇತರ ಮಹಾನಗರಗಳಿಗೆ ಹೋಲಿಸಿದರೆ ಇದು ಅತ್ಯಧಿಕವಾಗಿದೆ. ಚೆನ್ನೈನಲ್ಲಿ 24,500 ರೂ., ದೆಹಲಿಯಲ್ಲಿ 27,800 ರೂ., ಮುಂಬೈನಲ್ಲಿ 25,100 ರೂ., ಪುಣೆಯಲ್ಲಿ 24,700 ರೂ. ಇದೆ.
* ಈ ಪೈಕಿ ರಿಟೇಲ್ ವಲಯದಲ್ಲಿ ಶೇ.8.4ರಷ್ಟು ವೇತನ ಹೆಚ್ಚಳವಾಗಿದ್ದು, ಅದು ಇತರ ಎಲ್ಲ ವಲಯಗಳಿಗಿಂತ ಈ ವಿಷಯದಲ್ಲಿ ಮುಂದಿದೆ. ಗ್ರಾಹಕ ಉತ್ಪನ್ನಗಳ ವಲಯ ಶೇ.5.2ರೊಂದಿಗೆ ದ್ವಿತೀಯ, ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮಾ (ಬಿಎಫ್‌ಎಸ್‌ಐ) ವಲಯ ಶೇ.5.1ರೊಂದಿಗೆ ತೃತೀಯ ಸ್ಥಾನದಲ್ಲಿವೆ. ಲಾಜಿಸ್ಟಿಕ್ಸ್, ಎಫ್‌ಎಂಸಿಜಿ, ಹೆಲ್ತ್ ಕೇರ್, ಫಾರ್ಮಾಸ್ಕೂಟಿಕಲ್ಸ್, ಕಟ್ಟಡ ನಿರ್ಮಾಣ ಮತ್ತು ರಿಯಲ್ ಎಸ್ಟೇಟ್ ವಲಯಗಳಲ್ಲಿ ಮಧ್ಯಮ ಪ್ರಮಾಣದ ವೇತನ ಏರಿಕೆ ಆಗಿದೆ. ಅತಿ ಹೆಚ್ಚು ವೇತನ ನೀಡುವ ಉದ್ಯಮಗಳಲ್ಲಿ ದೂರಸಂಪರ್ಕ (29,200 ರೂ.), ಉತ್ಪಾದನೆ, ಇಂಜಿನಿಯರಿಂಗ್ ಮತ್ತು ಮೂಲಸೌಕರ್ಯ (28,200 ರೂ.), ಹೆಲ್ತ್ಕೇರ್ ಮತ್ತು ಫಾರ್ಮಾ (27,600 ರೂ.), ಕಟ್ಟಡ ನಿರ್ಮಾಣ ಮತ್ತು ರಿಯಲ್ ಎಸ್ಟೇಟ್ (27,000 ರೂ.) ಪ್ರಮುಖವಾಗಿವೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಟೀಮ್ ಲೀಸ್ ಸರ್ವೀಸಸ್ ಉದ್ಯೋಗ ಮತ್ತು ವೇತನ ಸಮೀಕ್ಷಾ ವರದಿ : ಉದ್ಯೋಗಕ್ಕೆ ಬೆಂಗಳೂರು ಬೆಸ್ಟ್
Published by Yallamma G
26 ಅಕ್ಟೋಬರ್ 2024