* ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರನ್ನು ಭಾರತ ಟಿ 20 ತಂಡದ ನೂತನ ನಾಯಕನ್ನಾಗಿ ಜುಲೈ18 ಕ್ಕೆ ನೇಮಕ ಮಾಡಲಾಗದೆ. ಏಕದಿನ ಹಾಗೂ ಟಿ20 ತಂಡಕ್ಕೆ ಯುವ ಆಟಗಾರ ಶುಭಮಾನ್ ಗಿಲ್ ಅವರನ್ನು ಉಪನಾಯಕನಾಗಿ ನೇಮಕ ಮಾಡಲಾಗಿದೆ.
* ಮುಂಬರುವ ಶ್ರೀಲಂಕಾ ಎದುರಿನ 3 ಟಿ20 ಪಂದ್ಯಗಳ ಸರಣಿಯಲ್ಲಿ ಸೂರ್ಯಕುಮಾರ್ ಅವರು ತಂಡವನ್ನು ಮುನ್ನಡೆಸಲಿದ್ದಾರೆ. ಜುಲೈ27, 28 ಮತ್ತು 30 ರಂದು ಪಂದ್ಯಗಳು ನಡೆಯಲಿವೆ.
* ಈ ಸರಣಿಯೊಂದಿಗೆ ನೂತನ ಕೋಚ್ ಗೌತಮ ಗಂಭೀರ್ ಅವರು ಕಾರ್ಯಾರಂಭ ಮಾಡಲಿದ್ದಾರೆ.
* ಕಳೆದ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಏಳು ಅರ್ಧಶತಕ ಗಳಿಸಿದ್ದ ರಿಯಾನ್ ಪರಾಗ್ ಟಿ20 ಮತ್ತು ಏಕದಿನ ತಂಡಕ್ಕೆ ಮತ್ತು ದೆಹಲಿಯ ವೇಗಿ ಹರ್ಷಿತ್ ರಾಣಾ ಅವರು ಏಕದಿನ ತಂಡಕ್ಕೆ ಸೇರ್ಪಡೆಯಾಗಿರುವ ಹೊಸ ಪ್ರತಿಭೆಗಳು. ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ವಿಶ್ರಾಂತಿ ಪಡೆದಿದ್ದರೆ.
ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಶುಭಮಾನ್ ಗಿಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ರಿಯಾನ್ ಪರಾಗ್, ರಿಷಭ್ ಪಂತ್ (ವಿ.ಕೀ), ಸಂಜು ಸ್ಯಾಟ್ಸನ್ (ವಿ.ಕೀ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಟೋಯಿ, ಅರ್ಷದೀಪ್ ಸಿಂಗ್, ಖಲೀಲ್ ಅಹ್ಮದ್, ಮೊಹಮದ್ ಸಿರಾಜ್.
ಟಿ20 ತಂಡಕ್ಕೆ ಸೂರ್ಯ ಕುಮಾರ್ ಸಾರಥ್ಯ
Published by Jyoti Angadi
20 ಜುಲೈ 2024