* ಮಂಡ್ಯದಲ್ಲಿ ಡಿಸೆಂಬರ್ 20 ರಿಂದ 22ರ ವರೆಗೆ ನಡೆಯಲಿರುವ 87 ನೇ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜುಲೈ 19 ರಂದು ಬಿಡುಗಡೆಗೊಳಿಸಿದರು.
* ಲಾಂಛನದಲ್ಲಿ ಮಂಡ್ಯದ ಸಂಸ್ಕೃತಿ ಮತ್ತು ವೈಶಿಷ್ಟ್ಯತೆಯನ್ನು ಅಳವಡಿಸಲಾಗಿದೆ. 'ಸಕ್ಕರೆಯ ನಾಡು, ಆಕ್ಕರೆಯ ಬೀಡು' ಎಂಬ ಧೈಯವಾಕ್ಯದೊಂದಿಗೆ ರೂಪುಗೊಂಡ ಲಾಂಛನ, ಮಂಡ್ಯದ ಅಸ್ಮಿತೆ, ಮಂಡ್ಯದ ಹೆಗ್ಗುರುತಾದ ಕಾವೇರಿ ನದಿ, ಬಿಸಿ ಬೆಲ್ಲ, ಹಸಿ ಹಾಗೂ ನೇಗಿಲಯೋಗಿ ರೈತ ಇವುಗಳನ್ನು ಒಳಗೊಂಡಿದೆ.
* ಶಿವನ ಸಮುದ್ರ-ಷಿಂಷಾ ಜಲವಿದ್ಯುತ ಯೋಜನೆ, ಗಗನಚುಕ್ಕಿ ಜಲಪಾತ, ನೇಗಿಲಯೋಗಿ ಶಿವಪುರ ಧ್ವಜ ಸತ್ಯಾಗ್ರಹ ಸೌಧ, ಮಂಡ್ಯ ಸಕ್ಕರೆ ಕಾರ್ಖಾನೆ- ಮೈಶುಗರ್, ಸಮ್ಮೇಳನದ ದಿನಾಂಕವನ್ನು ಕೂಡ ಒಳಗೊಂಡಿದೆ.
* ಕನ್ನಡ ಸಾಹಿತ್ಯ ಪರಿಷತ್ತಿನ ಲಾಂಛನ ಹಾಗೂ ಮದ್ಯ ಜಿಲ್ಲೆಯ ಸಂಸ್ಥಾಪಕರಾದ ನಾಲ್ವಡಿ ಅವರ ಭಾವಚಿತ್ರವನ್ನು ಹೊಂದಿದೆ.
* 87 ನೇ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನದಲ್ಲಿ ಬಿ.ಕೆ. ಎಸ್ ವರ್ಮಾ ಅವರು ಚಿತ್ರಿಸಿರುವ ಸರಕಾರದ ಅಧಿಕೃತ ನಾಡದೇವಿಯ ಚಿತ್ರವನ್ನು ಬಳಸಲಾಗಿದೆ.
ಶನಿವಾರ, 20 ಜುಲೈ 2024
11:22 ಪೂರ್ವಾಹ್ನ
Daily PDF
87 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ
Authored by:
Bhagya R K