* ದಕ್ಷಿಣ ಆಫ್ರಿಕಾದ ಹಂಗಾಮಿ ನಾಯಕ ಕೇಶವ್ ಮಹಾರಾಜ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 200 ವಿಕೆಟ್‌ಗಳ ಮೈಲಿಗಲ್ಲು ತಲುಪಿದ್ದಾರೆ. ಈ ಸಾಧನೆ ಮಾಡಿದ ದಕ್ಷಿಣ ಆಫ್ರಿಕಾದ ಮೊದಲ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು.
* ದಕ್ಷಿಣ ಆಫ್ರಿಕಾ ತನ್ನ ಮೊದಲ ಇನಿಂಗ್ಸ್‌ನಲ್ಲಿ 418 ರನ್ ಗಳಿಸಿತು. ಜವಾಬಿಗೆ ಜಿಂಬಾಬ್ವೆ 251 ರನ್‌ಗಳಿಗೆ ಆಲೌಟ್ ಆಯಿತು. ಜಿಂಬಾಬ್ವೆಯ ಸೀನ್ ವಿಲಿಯಮ್ಸ್ 137 ರನ್ ಗಳಿಸಿ ಶತಕ ಬಾರಿಸಿದರು, ಆದರೆ ತಂಡಕ್ಕೆ ಇನಿಂಗ್ಸ್ ಮುನ್ನಡೆ ತರಲಾಗಲಿಲ್ಲ.
* ಮಹಾರಾಜ್ 70 ರನ್‌ಗೆ 3 ವಿಕೆಟ್ ಪಡೆದರು, ವಿಯಾನ್ ಮಲ್ದರ್ 4 ವಿಕೆಟ್ ಪಡೆದರು. ಇವರ ಅಮೋಘ ಬೌಲಿಂಗ್ ಬಲದಿಂದ ದಕ್ಷಿಣ ಆಫ್ರಿಕಾಗೆ 167 ರನ್‌ಗಳ ಮುನ್ನಡೆ ಲಭಿಸಿತು.
* ದಕ್ಷಿಣ ಆಫ್ರಿಕಾ ಎರಡನೇ ಇನಿಂಗ್ಸ್‌ನಲ್ಲಿ ದಿನದ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 49 ರನ್ ಗಳಿಸಿದೆ. ಒಟ್ಟು ಮುನ್ನಡೆ 216 ರನ್ ಆಗಿದೆ. ಟೋನಿ ಡಿ ಝಾರ್ಜಿ (22) ಮತ್ತು ಮಲ್ದರ್ (25) ಆಟ ಮುಂದುವರಿಸುತ್ತಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ 200 ವಿಕೆಟ್ ಪಡೆದ ದಕ್ಷಿಣ ಆಫ್ರಿಕಾದ ಮೊದಲ ಸ್ಪಿನ್ನರ್ ಆಗಿ ಕೇಶವ್ ಮಹಾರಾಜ್
Published by Jyoti Angadi
30 ಜೂನ್ 2025