* ಭಾರತದ ಮುಂದಿನ ಜನಗಣತಿಗೆ ಮುನ್ನ, ಮನೆಗಳ ಪಟ್ಟಿ ಮಾಡುವ ಕಾರ್ಯಾಚರಣೆ (ಹೌಸ್ ಲಿಸ್ಟಿಂಗ್ ಆಪರೇಷನ್- HLO) 2026ರ ಏಪ್ರಿಲ್ 1ರಂದು ಆರಂಭವಾಗಲಿದೆ. ಇದು ಜನಗಣತಿಯ ಮೊದಲ ಹಂತವಾಗಿದೆ ಎಂದು ರಿಜಿಸ್ಟ್ರಾರ್ ಜನರಲ್ ಮೃತ್ಯುಂಜಯ್ ಕುಮಾರ್ ನಾರಾಯಣ್ ಹೇಳಿದ್ದಾರೆ.
* ಪ್ರಥಮ ಹಂತಕ್ಕೆ ಮುನ್ನ ರಾಜ್ಯ ಮತ್ತು ಜಿಲ್ಲಾಡಳಿತದ ಸಹಕಾರದೊಂದಿಗೆ ಗಣತಿದಾರರು ಮತ್ತು ಮೇಲ್ವಿಚಾರಕರ ನೇಮಕಾತಿ, ಕೆಲಸದ ಹಂಚಿಕೆ ನಡೆಯಲಿದೆ. ಈ ಹಂತದಲ್ಲಿ ದೇಶದ ಎಲ್ಲ ಮನೆಗಳ ಗುಣಲಕ್ಷಣ ಮತ್ತು ಸ್ವತ್ತುಗಳ ಮಾಹಿತಿ ಸಂಗ್ರಹಿಸಲಾಗುತ್ತದೆ.
* ಮತ್ತೆ ಜನಗಣತಿಯ ಎರಡನೇ ಹಂತದಲ್ಲಿ, ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ಮಾಹಿತಿ ಕಲೆಹಾಕಲಾಗುತ್ತದೆ. ಈ ಬಾರಿ ಜಾತಿ ಗಣತಿಯನ್ನೂ ಸೇರಿಸಲಾಗುವುದು ಎಂದು ಸರ್ಕಾರ ಪ್ರಕಟಿಸಿದೆ.
* ಇದು ಭಾರತದ ಮೊದಲ ಡಿಜಿಟಲ್ ಜನಗಣತಿ ಆಗಲಿದೆ. ನಾಗರಿಕರಿಗೆ ಸ್ವಯಂ-ಗಣತಿಗೆ ಅವಕಾಶ ಕಲ್ಪಿಸಲಾಗಿದೆ. ಒಟ್ಟು 34 ಲಕ್ಷ ಗಣತಿದಾರರು ಮತ್ತು ಮೇಲ್ವಿಚಾರಕರು ಹಾಗೂ 1.3 ಲಕ್ಷ ಅಧಿಕಾರಿಗಳನ್ನು ನಿಯೋಜಿಸಲಾಗುವುದು.
* 2025ರ ಡಿಸೆಂಬರ್ 31ರೊಳಗೆ ಜಿಲ್ಲೆ, ಉಪವಿಭಾಗ, ತಹಸಿಲ್, ಪೊಲೀಸ್ ಠಾಣೆ ಮುಂತಾದ ಆಡಳಿತಾತ್ಮಕ ಗಡಿಗಳನ್ನು ಅಂತಿಮಗೊಳಿಸುವಂತೆ ಸೂಚನೆ ನೀಡಲಾಗಿದೆ. ಜನಗಣತಿ ಪ್ರಕ್ರಿಯೆ ನಡೆಯುವ ಸಮಯದಲ್ಲಿ (2026 ಜ.1 ರಿಂದ 2027 ಮಾ.31) ಯಾವುದೇ ಗಡಿ ಬದಲಾವಣೆ ನಡೆಸಬಾರದು ಎಂಬುದು ನಿಬಂಧನೆಯಾಗಿದೆ.
ಸೋಮವಾರ, 30 ಜೂನ್ 2025
9:32 ಪೂರ್ವಾಹ್ನ
Daily PDF
2026ರ ಏಪ್ರಿಲ್ 1ರಿಂದ ಜನಗಣತಿಯ ಪ್ರಾರಂಭ: ಮನೆ ಪಟ್ಟಿ ಕಾರ್ಯಾಚರಣೆ ಆರಂಭ
Authored by:
Jyoti Angadi