* ಅಮೇರಿಕ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿಯಾದ ಟೆಸ್ಲಾ ಭಾರತದಲ್ಲಿ ರೂ 16 ,700 ಕೋಟಿಯಿಂದ 25 ಸಾವಿರ ಕೋಟಿ ರೂಗಳವರೆಗೆ ಬಂಡವಾಳ ಹೂಡಿಕೆ ಮಾಡುವ ನಿರೀಕ್ಷೆ ಇದೆ. * ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಟೆಸ್ಲಾ ಕಂಪನಿಯ CEO ಇಲಾನ್ ಮಸ್ಕ್ ಅವರು ಏಪ್ರಿಲ್ 22 ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಟೆಸ್ಲಾ ಕಂಪನಿಯ ಸ್ಥಾಪನೆ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ.
* 2023 ರಲ್ಲಿ ಭಾರತ ದೇಶದಲ್ಲಿಎಲೆಕ್ಟ್ರಿಕ್ ವಾಹನಗಳ ಮಾರಾಟವು ಶೇ 2ರಷ್ಟಿದೆ. 2030 ರ ವೇಳೆಗೆ ಮಾರಾಟದ ಪ್ರಮಾಣವನ್ನು ಶೇ 30 ರಷ್ಟಕ್ಕೆ ಕೇಂದ್ರ ಸರ್ಕಾರ ಹೆಚ್ಚಿಸುವ ಗುರಿಯನ್ನು ಹೊಂದಿದೆ.
* ಇತ್ತೀಚಿಗೆ ಕೇಂದ್ರ ಸರ್ಕಾರವು ಹೊಸ ಎಲೆಕ್ಟ್ರಿಕ್ ವಾಹನಗಳ ನೀತಿಯನ್ನು ಘೋಷಣೆ ಮಾಡಿದೆ, ಇದರ ಅಡಿಯಲ್ಲಿ ಕನಿಷ್ಠ 4 169 ಕೋಟಿ ಹೂಡಿಕೆಯೊಂದಿಗೆ ಭಾರತದ ಉತ್ಪಾದನಾ ಘಟಕ ಕಂಪನಿಗಳಿಗೆ ಆಮದು ಸುಂಕದಲ್ಲಿ ರಿಯಾತಿಯನ್ನು ಪ್ರಕಟಿಸಲಾಗಿದೆ.
* ಇಲಾನ್ ಮಸ್ಕ್ ಅವರು ಅಮೇರಿಕಾದಲ್ಲಿ ಸ್ಪೇಸ್ ಎಕ್ಸ್ ಹೆಸರಿನ ಖಾಸಗಿ ರಾಕೆಟ್ ಕಂಪನಿಯ ಒಡೆತನವನ್ನು ಹೊಂದಿದ್ದಾರೆ.
ಗುರುವಾರ, 18 ಎಪ್ರಿಲ್ 2024
4:08 ಅಪರಾಹ್ನ
Daily PDF
ಟೆಸ್ಲಾ : ಭಾರತದಲ್ಲಿ 25 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡುವ ನಿರೀಕ್ಷೆ
Authored by:
Yallamma G