* ಗುಪ್ತಚರ ಬ್ಯೂರೋ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ತಪನ್ ದೇಕಾ ಅವರ ಸೇವಾವಧಿಗೆ ಮತ್ತೊಮ್ಮೆ ವಿಸ್ತರಣೆ ನೀಡಲಾಗಿದೆ.
* 1988ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ತಪನ್ ದೇಕಾ ಭಯೋತ್ಪಾದನೆ ಮತ್ತು ಮೂಲಭೂತವಾದ ಸಂಬಂಧಿತ ಪ್ರಕರಣಗಳ ತನಿಖೆಯಲ್ಲಿ ನಿಪುಣತೆ ಹೊಂದಿದ್ದಾರೆ.
* ಮಂಗಳವಾರ ಹೊರಬಂದ ಆದೇಶದಂತೆ, ಕ್ಯಾಬಿನೆಟ್ ನೇಮಕಾತಿ ಸಮಿತಿಯು ದೇಕಾ ಅವರ ಸೇವಾವಧಿಯನ್ನು ಮತ್ತೊಂದು ವರ್ಷ ಅಥವಾ ಮುಂದಿನ ಆದೇಶದವರೆಗೆ 2026ರ ಜೂನ್ ವರೆಗೆ ವಿಸ್ತರಿಸಲು ಅನುಮೋದನೆ ನೀಡಿದೆ.
* 2022ರಲ್ಲಿ ಅವರು ಎರಡು ವರ್ಷಗಳ ಅವಧಿಗೆ ಗುಪ್ತಚರ ಬ್ಯೂರೋ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು. ಕಳೆದ ಜೂನ್‌ನಲ್ಲಿ ಈ ಅವಧಿಗೆ ಒಂದು ವರ್ಷದ ವಿಸ್ತರಣೆ ನೀಡಲಾಗಿತ್ತು.
ಬುಧವಾರ, 21 ಮೇ 2025
10:44 ಪೂರ್ವಾಹ್ನ
Daily PDF
ತಪನ್ ದೇಕಾ ಸೇವಾವಧಿಗೆ ಮತ್ತಷ್ಟು ವಿಸ್ತರಣೆ
Authored by:
Jyoti Angadi