➤ ಬೆಳಗಾವಿಯ ಸುವರ್ಣಸೌಧದಲ್ಲಿ ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನ: ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನವು ಪ್ರತಿವರ್ಷದಂತೆ ಈ ಬಾರಿಯೂ ಬೆಳಗಾವಿಯ ಸುವರ್ಣಸೌಧದಲ್ಲಿ ನವೆಂಬರ್ 30ರಿಂದ ಡಿಸೆಂಬರ್ 11ರವರೆಗೆ ಒಟ್ಟು 10 ದಿನಗಳ ಕಾಲ ಎರಡು ವಾರಗಳ ಅವಧಿಗೆ ನಡೆಯಲಿದೆ.
➤ ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಶೇ. 3 ತುಟ್ಟಿಭತ್ಯೆ (DA) ಹೆಚ್ಚಳ: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು ದೀಪಾವಳಿ ಹಬ್ಬದ ಕೊಡುಗೆಯಾಗಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ (DA) ಹಾಗೂ ತುಟ್ಟಿಭತ್ಯೆ ಪರಿಹಾರವನ್ನು (DR) ಶೇಕಡಾ 3ರಷ್ಟು ಹೆಚ್ಚಿಸಲು ಅನುಮೋದನೆ ನೀಡಿದೆ.
➤ ರೈಲ್ವೆ ಆಫ್ಲೈನ್ ಟಿಕೆಟ್ಗಳಿಗೆ ಕಡ್ಡಾಯ ವಿಮೆ ಸೌಲಭ್ಯಕ್ಕೆ ಸುಪ್ರೀಂ ಕೋರ್ಟ್ ಸೂಚನೆ: ರೈಲು ನಿಲ್ದಾಣಗಳ ಕೌಂಟರ್ಗಳಲ್ಲಿ ಖರೀದಿಸುವ ಎಲ್ಲಾ ಆಫ್ಲೈನ್ ಟಿಕೆಟ್ಗಳಿಗೂ ಅಕ್ಟೋಬರ್ 27ರಿಂದ ಜಾರಿಯಾಗುವಂತೆ ಕಡ್ಡಾಯವಾಗಿ ವಿಮೆ ಸೌಲಭ್ಯ ಒದಗಿಸಬೇಕೆಂದು ಸುಪ್ರೀಂ ಕೋರ್ಟ್ ಭಾರತೀಯ ರೈಲ್ವೆಗೆ ನಿರ್ದೇಶನ ನೀಡಿದೆ.
➤ ತ್ರಿಪುರಾದ ಮೊದಲ ಟೀ ಹರಾಜು ಕೇಂದ್ರ ಅಗರ್ತಲಾದಲ್ಲಿ ಉದ್ಘಾಟನೆ: ಸಾರಿಗೆ ವೆಚ್ಚವನ್ನು ತಗ್ಗಿಸಿ ಸ್ಥಳೀಯ ಬೆಳೆಗಾರರಿಗೆ ಸೂಕ್ತ ಮಾರುಕಟ್ಟೆ ಬೆಲೆ ದೊರಕಿಸುವ ಉದ್ದೇಶದಿಂದ ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಹಾ ಅವರು ರಾಜ್ಯದ ಪ್ರಥಮ ಟೀ ಹರಾಜು ಕೇಂದ್ರವನ್ನು ಅಗರ್ತಲಾದಲ್ಲಿ ಉದ್ಘಾಟಿಸಿದ್ದಾರೆ.
➤ 'ತಂಬಾಕು ಮುಕ್ತ ಯುವ ಅಭಿಯಾನ 4.0' ಗೆ ಅಧಿಕೃತ ಚಾಲನೆ: ಯುವಜನರಲ್ಲಿ ತಂಬಾಕು ಸೇವನೆ ತಡೆಯಲು ಹಾಗೂ ಶೈಕ್ಷಣಿಕ ಸಂಸ್ಥೆಗಳು ಮತ್ತು ಹಳ್ಳಿಗಳನ್ನು ತಂಬಾಕು ಮುಕ್ತಗೊಳಿಸಲು ಕೇಂದ್ರ ಸರ್ಕಾರವು ಅಕ್ಟೋಬರ್ 28ರಿಂದ 60 ದಿನಗಳ ರಾಷ್ಟ್ರವ್ಯಾಪಿ 'ತಂಬಾಕು ಮುಕ್ತ ಯುವ ಅಭಿಯಾನ 4.0' ಅನ್ನು ಪ್ರಾರಂಭಿಸಿದೆ.
➤ ಅಟಲ್ ವಯೋ ಅಭ್ಯುದಯ ಯೋಜನೆಗೆ ₹77.98 ಕೋಟಿ ಅನುದಾನ ಬಿಡುಗಡೆ: ದೇಶದ ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ಜಾರಿಯಲ್ಲಿರುವ 'ಅಟಲ್ ವಯೋ ಅಭ್ಯುದಯ ಯೋಜನೆ'ಯ ಅಡಿಯಲ್ಲಿ 755 ಪ್ರಮುಖ ಯೋಜನೆಗಳ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರವು ₹77.98 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದೆ.
➤ ಸಿಕ್ಕಿಂನ ಜ್ಞಾನಾಂಗ್ ಕಣಿವೆಯಲ್ಲಿ ಚೊಚ್ಚಲ 'ಹಿಮಾಲಯನ್ ಯಾಕ್ ಉತ್ಸವ': ಅಪರೂಪದ ಚಾಮರಿ ಮೃಗಗಳ (ಯಾಕ್) ಸಂರಕ್ಷಣೆ ಮತ್ತು ಜಾಗೃತಿ ಮೂಡಿಸುವ ಪ್ರಮುಖ ಉದ್ದೇಶದೊಂದಿಗೆ ಸಿಕ್ಕಿಂನ ಜ್ಞಾನಾಂಗ್ ಕಣಿವೆಯಲ್ಲಿ ಪ್ರಥಮ ಆವೃತ್ತಿಯ 'ಹಿಮಾಲಯನ್ ಯಾಕ್ ಉತ್ಸವ'ವನ್ನು ಆಯೋಜಿಸಲಾಗಿದೆ.
➤ 2026ರ ವಿಶ್ವದ ಅತ್ಯುತ್ತಮ ವಸ್ತುಸಂಗ್ರಹಾಲಯಗಳ ಪಟ್ಟಿಯಲ್ಲಿ ಬಿಹಾರ ಮ್ಯೂಸಿಯಂಗೆ 9ನೇ ಸ್ಥಾನ: 'ವಿ ವರ್ತ್ ಜರ್ನಿ' ಪ್ರಕಟಿಸಿದ 2026ರ ವಿಶ್ವದ 100 ಅತ್ಯುತ್ತಮ ವಸ್ತುಸಂಗ್ರಹಾಲಯಗಳ ಪಟ್ಟಿಯಲ್ಲಿ ಪಾಟ್ನಾದ ಬಿಹಾರ ಮ್ಯೂಸಿಯಂ 9ನೇ ಸ್ಥಾನ ಪಡೆಯುವ ಮೂಲಕ ಏಷ್ಯಾದಲ್ಲೇ ಪ್ರಥಮ ಸ್ಥಾನ ಹಾಗೂ ಭಾರತದ ಏಕೈಕ ಮ್ಯೂಸಿಯಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
➤ ಬುಡಕಟ್ಟು ಸಚಿವಾಲಯದಿಂದ 'ಜನಜಾತೀಯ ಗೌರವ್ ಪಖವಾಡ' ಆಚರಣೆ: ಭಗವಾನ್ ಬಿರ್ಸಾ ಮುಂಡಾ ಅವರ ಜಯಂತಿಯ ಸ್ಮರಣಾರ್ಥ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ನವೆಂಬರ್ 1ರಿಂದ 15ರವರೆಗೆ ದೇಶಾದ್ಯಂತ 'ಜನಜಾತೀಯ ಗೌರವ್ ಪಖವಾಡ' ಪಾಕ್ಷಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
➤ ಕೃಷ್ಣ-ಗೋದಾವರಿ ಅನಿಲ ವಿವಾದ: ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಏಕೈಕ ಮಧ್ಯಸ್ಥಗಾರರಾಗಿ ನೇಮಕ: ರಿಲಯನ್ಸ್ ಸಂಸ್ಥೆ ಮತ್ತು ಭಾರತ ಸರ್ಕಾರದ ನಡುವಿನ ಕೃಷ್ಣ-ಗೋದಾವರಿ ಅನಿಲ ಸ್ಥಳಾಂತರ ವಿವಾದದ ಇತ್ಯರ್ಥಕ್ಕಾಗಿ ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅವರನ್ನು ಏಕೈಕ ಮಧ್ಯಸ್ಥಗಾರರನ್ನಾಗಿ (Arbitrator) ನೇಮಿಸಲಾಗಿದೆ.
ಪ್ರಮುಖ ಸುದ್ದಿಗಳು 01-11-2026
Published by Akshata Halli
1 hour ago