* ಪ್ರಾಚೀನ ತಮಿಳು ಇತಿಹಾಸದ ಮರು ಆವಿಷ್ಕಾರದ ಉದ್ದೇಶದಿಂದ ರಾಯಚೂರಿನ ಮಸ್ಕಿ ಸೇರಿದಂತೆ ನೆರೆರಾಜ್ಯಗಳ 4 ಪ್ರದೇಶಗಳಲ್ಲಿ ಉತ್ಖನನ ಕೈಗೆತ್ತಿಕೊಳ್ಳಲಾಗುವುದು ಎಂದು ತಮಿಳು ನಾಡು ಸರಕಾರ ಘೋಷಿಸಿದೆ.
* ಕೇರಳದ ಮುಸಿರಿ, ಒಡಿಶಾದ ಪಾಲೂರು, ಆಂಧ್ರದ ವೆಂಗಿ ಮತ್ತು ಕರ್ನಾಟಕದ ಮಸ್ಕಿಯಲ್ಲಿ ಪುರಾತತ್ವ ಉತ್ಖನನ ನಡೆಸಲಿದ್ದೇವೆ ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ.
- ಉತ್ಖನನ ಎಂದರೇನು?
ಭೂಮಿಯಲ್ಲಿ ಹುದುಗಿಹೋಗಿರುವ ಮಾನವ ನಾಗರಿಕತೆಗೆ ಸಂಬಂಧಿಸಿದ ಅವಶೇಷಗಳನ್ನು ಭೂಮಿಯಿಂದ ಅಗೆಯುವುದಕ್ಕೆ ಪುರಾತತ್ತ್ವ ಶೋಧನೆಯಲ್ಲಿ ಬಳಸುವ ಪದ ಉತ್ಖನನ(Excavation).
* ಕರ್ನಾಟಕದ ಗಡಿಯಲ್ಲಿರುವ ಹೊಗೇನಕಲ್ ಮತ್ತು ಪೂಂಪುಹಾರ್ ಪ್ರವಾಸೋದ್ಯಮ ಅಭಿವೃದ್ಧಿಗೆ 55 ಕೋಟಿ ರೂ. ಅನುದಾನ ಮೀಸಲಿಡುವುದಾಗಿಯೂ ಸಚಿವ ಥೆನ್ನರಸು ಘೋಷಿಸಿದ್ದಾರೆ. ಜತೆಗೆ 7,890 ಕೋಟಿ ರೂ. ವೆಚ್ಚದಲ್ಲಿ ಹೊಗೇನಕಲ್ ಸಂಯೋಜಿತ ನೀರು ಪೂರೈಕೆ ಯೋಜನೆಯ ಎರಡನೇ ಹಂತವನ್ನು ಕೈಗೆತ್ತಿಕೊಳ್ಳಲಾಗುವುದು ಎಂದಿದ್ದಾರೆ.
ತಮಿಳುನಾಡು ಸರ್ಕಾರ ಬಜೆಟ್‌ನಲ್ಲಿ ರಾಯಚೂರಿನ ಮಸ್ಕಿಯಲ್ಲಿ ಉತ್ಖನನ ಘೋಷಣೆ
Published by Yallamma G
22 ಫೆಬ್ರವರಿ 2024