* ತಮಿಳು ಭಾಷಿಕ ಪ್ರದೇಶಗಳನ್ನು ಒಗ್ಗೂಡಿಸಲು ನಡೆದ ಹೋರಾಟದಲ್ಲಿ ಮಡಿದ ಹುತಾತ್ಮರನ್ನು ಸ್ಮರಿಸುವ "ಗಡಿ ಹುತಾತ್ಮರ ದಿನಾಚರಣೆ" (“On Border Struggle Martyrs' Day") ಎಂದು ಆಚರಿಸಲಾಗುತ್ತದೆ.
* ಈ ಬಗ್ಗೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ತಮಿಳುನಾಡು ರಾಜ್ಯ ರಚನೆಗೆ ಪ್ರಾಣ ನೀಡಿದ ಹುತಾತ್ಮರ ನೆನಪಿಗಾಗಿ ನವೆಂಬರ್.1 ರಂದು ಗಡಿ ಹುತಾತ್ಮರ ದಿನವೆಂದು ಆಚರಿಸುವುದಾಗಿ ಘೋಷಿಸಿದ್ದಾರೆ.
* ಡಿಎಂಕೆ ಸರಕಾರವು ಕಳೆದ ವರ್ಷದಿಂದ ನವೆಂಬರ್.1ರ ಬದಲಾಗಿ ಮದ್ರಾಸ್ ಪ್ರಸಿಡೆನ್ಸಿಯನ್ನು ತಮಿಳುನಾಡು ಎಂದು ಮರುನಾಮಕರಣ ಮಾಡಲು ವಿಧಾನಸಭೆಯಲ್ಲಿ ನಿರ್ಣಯವನ್ನು ಮಂಡಿಸಿದ ನಂತರ ಜುಲೈ18ನ್ನು ತಮಿಳುನಾಡು ದಿನಾಚರಣೆ ಎಂದು ಆಚರಿಸಲು ಪ್ರಾರಂಭಿಸಿದೆ.
ತಮಿಳುನಾಡು ನ.1ಕ್ಕೆ ಗಡಿ ಹುತಾತ್ಮರ ದಿನಾಚರಣೆ ಸಿಎಂ ಸ್ಟಾಲಿನ್ ಘೋಷಣೆ
Published by Bhagya R K
02 ನವೆಂಬರ್ 2024