* ಭಾರತ ದೇಶದ 14,500 ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋನ್ ಒದಗಿಸಲಿರುವ ಕೇಂದ್ರದ ಮಹತ್ವಾಕಾಂಕ್ಷೆಯ “ನಮೋ ಡ್ರೋನ್ ದೀದಿ ಯೋಜನೆ"ಗೆ ಚಾಲನೆ ದೊರೆತಿದೆ.
* ಕೇಂದ್ರ ಕೃಷಿ, ಗ್ರಾಮೀಣಾಭಿವೃದ್ಧಿ, ರಸಗೊಬ್ಬರ, ವಿಮಾನಯಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯದರ್ಶಿಗಳ ಸಮಿತಿ ಇದರ ಮೇಲ್ವಿಚಾರಣೆ ನಡೆಸಲಿದೆ.
* ಸ್ವ-ಸಹಾಯ ಸಂಘಗಳಿಗೆ ಡ್ರೋನ್ ಮತ್ತು ಅದರ ಪರಿಕರಗಳ ಖರೀದಿಗೆ ಶೇ.80 ರಷ್ಟು ಹಣವನ್ನು ಕೇಂದ್ರ ನೀಡಲಿದೆ. ಅದು ಗರಿಷ್ಠ 8 ಲಕ್ಷ ರೂ.ಗಳಾಗಿರಲಿದೆ. ಇದಕ್ಕಿಂತಲೂ ಹೆಚ್ಚಿನ ಮೊತ್ತದ ಡ್ರೋನ್ ಖರೀದಿಸಿದರೆ ರಾಷ್ಟ್ರೀಯ ಕೃಷಿ ಮೂಲಸೌಕರ್ಯ ಹಣಕಾಸು ಸೌಲಭ್ಯದ (ಎಐಎಫ್) ಅನ್ವಯ ಶೇ.3ರ ಬಡ್ಡಿದರಲ್ಲಿ ಸಾಲ ಪಡೆಯಬಹುದಾಗಿದೆ.
* ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅನ್ವಯ 1261 ಕೋಟಿ ರೂ.ವೆಚ್ಚದಲ್ಲಿ ನಮೋ ಡ್ರೋನ್ ದೀದಿ ಯೋಜನೆ ಘೋಷಿಸಲಾಗಿದ್ದು, ಮಹಿಳಾ ಸಂಘಗಳು ಈ ಡ್ರೋನ್ ಖರೀದಿಸಿ ರೈತರಿಗೆ ಬಾಡಿಗೆ ನೀಡಬಹುದು.
* ಈ ಯೋಜನೆ ಅನ್ವಯ ಬರೀ ಡ್ರೋನ್‌ಗಳನ್ನು ಮಾತ್ರ ಪೂರೈಸುವುದಲ್ಲ ಬದಲಿಗೆ ಪ್ಯಾಕೇಜ್ ರೂಪದಲ್ಲಿ ರಸಗೊಬ್ಬರ, ಬ್ಯಾಟರಿ ಚಾರ್ಜರ್, ಕೀಟನಾಶಕ ಸಿಂಪಡಿಸುವ ಸ್ಪ್ರೇ, 4 ಸ್ಟಾಂಡರ್ಡ್ ಬ್ಯಾಟರಿ ಸೆಟ್, ಡ್ರೋನ್ ಸಾಗಿಸುವ ಬಾಕ್ಸ್, ಕೆಮರಾ, ಎನಿಮೋಮೀಟರ್, ಪಿಎಚ್ ಮೀಟರ್ ಸೇರಿದಂತೆ ಎಲ್ಲಾ ವಸ್ತು ಗಳನ್ನೂ ಪೂರೈಸಲಾಗುವುದು.
ಶನಿವಾರ, 02 ನವೆಂಬರ್ 2024
1:20 ಅಪರಾಹ್ನ
Daily PDF
ಸ್ತ್ರೀ ಸಶಕ್ತೀಕರಣಕ್ಕೆ ನಮೋ ಡ್ರೋನ್ ದೀದಿಗೆ ಕೇಂದ್ರ ಸರಕಾರ ಚಾಲನೆ
Authored by:
Bhagya R K