➤ ಸಮುದ್ರದ ಆಳವು ಯಾವಾಗಲೂ ಮಾನವನಿಗೆ ಕುತೂಹಲದ ವಿಷಯ. ಸಾಗರದ ತಳಭಾಗದಲ್ಲಿ ಕಂಡುಬರುವ ವಿಶಿಷ್ಟ ಲಕ್ಷಣಗಳಲ್ಲಿ 'ಬ್ಲೂ ಹೋಲ್‌ಗಳು' ಅತ್ಯಂತ ನಿಗೂಢವಾದವುಗಳಾಗಿವೆ. ಇತ್ತೀಚೆಗೆ ದಕ್ಷಿಣ ಚೀನಾ ಸಮುದ್ರದಲ್ಲಿರುವ ಸನ್ಶಾ ಯೋಂಗ್ಲೆ ಬ್ಲೂ ಹೋಲ್ (Sansha Yongle Blue Hole) ಅಥವಾ ಜನಪ್ರಿಯವಾಗಿ 'ಡ್ರ್ಯಾಗನ್ ಹೋಲ್' ಎಂದು ಕರೆಯಲ್ಪಡುವ ಪ್ರದೇಶವು ವಿಜ್ಞಾನಿಗಳ ಗಮನ ಸೆಳೆದಿದೆ.
➤ ಬ್ಲೂ ಹೋಲ್: ಸಮುದ್ರದ ತಳದಲ್ಲಿರುವ ಬೃಹತ್ ಗಾತ್ರದ ಸಿಂಕ್‌ಹೋಲ್‌ಗಳಾಗಿವೆ (Sinkholes). ಇವು ಪ್ರಮುಖವಾಗಿ ಸುಣ್ಣದ ಕಲ್ಲು (Limestone) ಅಥವಾ ಕಾರ್ಬೋನೇಟ್ ಬಂಡೆಗಳಿಂದ ಮಾಡಲ್ಪಟ್ಟಿದ್ದು, ಗಾಢವಾದ ನೀಲಿ ಬಣ್ಣದಿಂದ ಕೂಡಿರುತ್ತವೆ. ಸುತ್ತಮುತ್ತಲಿನ ತಿಳಿ ನೀಲಿ ನೀರಿಗಿಂತ ಇವು ಹೆಚ್ಚು ಆಳವಾಗಿರುವುದರಿಂದ ಕಡು ನೀಲಿ ಬಣ್ಣದಲ್ಲಿ ಕಾಣುತ್ತವೆ.
➤ ಡ್ರ್ಯಾಗನ್ ಹೋಲ್‌ನ ವಿಶೇಷತೆಗಳು: ಇದು ದಕ್ಷಿಣ ಚೀನಾ ಸಮುದ್ರದಲ್ಲಿದೆಇದರ ನಿಖರ ಆಳ 301.19 ಮೀಟರ್. ಒಂದು ಕಾಲದಲ್ಲಿ ಇದು ವಿಶ್ವದ ಅತಿ ಆಳದ ಬ್ಲೂ ಹೋಲ್ ಆಗಿತ್ತು. ಆದರೆ ಪ್ರಸ್ತುತ ಮೆಕ್ಸಿಕೋದಲ್ಲಿ ಪತ್ತೆಯಾದ ಮತ್ತೊಂದು ಬ್ಲೂ ಹೋಲ್ ಮೊದಲ ಸ್ಥಾನದಲ್ಲಿದ್ದು, ಡ್ರ್ಯಾಗನ್ ಹೋಲ್ ಎರಡನೇ ಸ್ಥಾನದಲ್ಲಿದೆ. ಇದು ಕೇವಲ ನೇರವಾದ ಗುಂಡಿಯಲ್ಲ. ಸಂಶೋಧನೆಯ ಪ್ರಕಾರ, ಇದು ಕೆಳಕ್ಕೆ ಹೋದಂತೆ ವಕ್ರವಾಗಿ (Bends and Tilts) ಸಾಗುತ್ತದೆ. ಇದರ ಅಂತಿಮ ಬಿಂದುವು ಮೇಲ್ಭಾಗದ ಪ್ರವೇಶದ್ವಾರಕ್ಕಿಂತ 100 ಮೀಟರ್‌ಗಳಷ್ಟು ಪಕ್ಕಕ್ಕೆ ಸರಿದಿದೆ.
➤ ಈ ಬ್ಲೂ ಹೋಲ್‌ನ ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ ಇದರ ರಾಸಾಯನಿಕ ಸಂಯೋಜನೆ.
- ಆಮ್ಲಜನಕ ರಹಿತ ವಲಯ: ನೀರಿನ ಮೇಲ್ಮೈಯಿಂದ ಸುಮಾರು 90 ರಿಂದ 100 ಮೀಟರ್ ಆಳದ ನಂತರ ಇಲ್ಲಿ ಆಮ್ಲಜನಕದ ಪ್ರಮಾಣ ಶೂನ್ಯಕ್ಕೆ ಇಳಿಯುತ್ತದೆ.
- ಆಮ್ಲಜನಕದ ಕೊರತೆಯಿಂದಾಗಿ 100 ಮೀಟರ್‌ಗಿಂತ ಕೆಳಗೆ ಮೀನುಗಳು ಅಥವಾ ಇತರ ಸಮುದ್ರ ಜೀವಿಗಳು ಬದುಕಲು ಅಸಾಧ್ಯ. ಬದಲಾಗಿ ಇಲ್ಲಿ ಹೈಡ್ರೋಜನ್ ಸಲ್ಫೈಡ್ ಕಂಡುಬರುತ್ತದೆ.
- ಇಲ್ಲಿನ ನೀರು ಹೊರಗಿನ ಸಮುದ್ರದ ನೀರಿನೊಂದಿಗೆ ಬೆರೆಯುವುದಿಲ್ಲ. ಈ ಕಾರಣದಿಂದಾಗಿ ಸಾವಿರಾರು ವರ್ಷಗಳ ಹಿಂದಿನ ಸಮುದ್ರದ ಪರಿಸರ ಮತ್ತು ಹವಾಮಾನ ಬದಲಾವಣೆಯ ಕುರುಹುಗಳು ಇಲ್ಲಿ ಸಂರಕ್ಷಿಸಲ್ಪಟ್ಟಿವೆ. ವಿಜ್ಞಾನಿಗಳು ಇದನ್ನು 'ನೈಸರ್ಗಿಕ ದಾಖಲೆಗಾರ' (Natural Archive) ಎಂದು ಕರೆಯುತ್ತಾರೆ.
➤ 2017ರಲ್ಲಿ ಹೈ-ಗ್ರೇಡ್ ಅಂಡರ್ ವಾಟರ್ ರೋಬೋಟ್ ಬಳಸಿ ಇದರ 3D ಮ್ಯಾಪಿಂಗ್ ಮಾಡಲಾಯಿತು.
ಬುಧವಾರ, 11 ಫೆಬ್ರುವರಿ 2026
11:13 ಪೂರ್ವಾಹ್ನ
Daily PDF
ಸಮುದ್ರದ ಆಳದ ವಿಸ್ಮಯ 'ಡ್ರ್ಯಾಗನ್ ಹೋಲ್': ವಿಶ್ವದ 2ನೇ ಅತಿ ಆಳದ ಬ್ಲೂ ಹೋಲ್
Authored by:
Yallamma G