* ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾದ ಡೊನಾಲ್ಡ್ ಟ್ರಂಪ್ ಭಾರತವನ್ನು ಸ್ನೇಹಿ ರಾಷ್ಟ್ರವೆಂದು ಪರಿಗಣಿಸಿದರಾದರೂ ವ್ಯಾಪಾರದ ವಿಷಯಕ್ಕೆ ಬಂದರೆ ನಿಷ್ಠುರವಾದ ಮಂಡಿಸುತ್ತಾರೆ.
* ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗುವ ಉತ್ಪನ್ನಗಳ ಮೇಲೆ ಭಾರತ ತೆರಿಗೆ ಹೇರುವುದರ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದು, ತಮ್ಮ ದೇಶವೂ ಭಾರತೀಯ ಉತ್ಪನ್ನಗಳ ಮೇಲೆ ತೆರಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
* ಅಮೇರಿಕಾದ ಕೆಲ ವಸ್ತುಗಳ ಆಮದಿಗೆ ಭಾರತವು ವಿಧಿಸಿರುವ ಹೆಚ್ಚಿನ ಸುಂಕಕ್ಕೆ ಪ್ರತಿಯಾಗಿ ಅಷ್ಟೇ ಮೊತ್ತದ ಸುಂಕ ವಿಧಿಸುವುದಾಗಿ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
* ಬಹುತೇಕ ಭಾರತವು ಎಲ್ಲ ಸಂದರ್ಭದಲ್ಲಿ ನಮಗೆ ಸುಂಕ ವಿಧಿಸಿದ್ದಾರೆ. ಆದರೆ ನಾವು ಸುಂಕ ವಿಧಿಸಿರಲಿಲ್ಲ. ಎಂದು ಟ್ರಂಪ್ ಸುದ್ಧಿಗಾರರಿಗೆ ತಿಳಿಸಿದ್ದಾರೆ.
* ಐದಾರು ವರ್ಷದ ಪೂರ್ವದಲ್ಲಿ ಅಮೆರಿಕದ ಹಾರ್ಲೀ ಡೇವಿಡ್ಸನ್ ಬೈಕುಗಳ ಮೇಲೆ ಭಾರತ ಶೇ. 100ರಷ್ಟು ಸುಂಕ ವಿಧಿಸುತ್ತಿತ್ತು. ಬಳಿಕ ಅದನ್ನು ಶೇ. 50ರಷ್ಟು ಕಡಿತಗೊಳಿಸಲಾಯಿತು. ಆದರೂ ಕೂಡ ಅದು ಅತಿಯಾಯಿತು ಎನ್ನುವುದು ಟ್ರಂಪ್ ಅನಿಸಿಕೆ.
* ಕೆಲ ತಿಂಗಳ ಹಿಂದೆ ಭಾರತದ ಸಚಿವರು ಹಾರ್ಲೀ ಡೇವಿಡ್ಸನ್ ಬೈಕುಗಳ ಮೇಲಿನ ಆಮದು ಸುಂಕವನ್ನು ಮತ್ತಷ್ಟು ಇಳಿಸುವ ಕುರಿತು ಮಾತುಗಳನ್ನಾಡಿದ್ದರು.
* 'ಕ್ರಿಯೆಗೆ ಸಮನಾದ ಪ್ರತಿಕ್ರಿಯೆ ಡೊನಾಲ್ಡ್ ಟ್ರಂಪ್ ಅವರ ಆಡಳಿತದ ಲಕ್ಷಣವಾಗಿರುತ್ತದೆ. ನಾವು ನಿಮ್ಮೊಂದಿಗೆ ಹೇಗೆ ನಡೆದುಕೊಳ್ಳಬೇಕೆಂದು ಬಯಸುತ್ತಿರೋ ಅದಕ್ಕೆ ಸರಿಯಾಗಿ ನೀವು ಕೂಡ ನಮ್ಮೊಂದಿಗೆ ನಡೆದುಕೊಳ್ಳಬೇಕು' ಎಂದು ಟ್ರಂಪ್ ಅವರ ವಾಣಿಜ್ಯ ಕಾರ್ಯದರ್ಶಿ ಪಿಕ್ ಹಾವರ್ಡ್ ಲುಟ್ಟಿಕ್ ಅವರು ಹೇಳಿದ್ದಾರೆ.
ತೆರಿಗೆ ಹಾಕುವ ಭಾರತದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ ಡೊನಾಲ್ಡ್ ಟ್ರಂಪ್
Published by Jyoti Angadi
19 ಡಿಸೆಂಬರ್ 2024