* ಹಿಂಸಾಚಾರ, ಬಲಾತ್ಕಾರ ಅಥವಾ ಹಸ್ತಕ್ಷೇಪಕ್ಕೆ ಯಾವುದೇ ಬೆದರಿಕೆಯಿಲ್ಲದೆ ಸಹಬಾಳ್ವೆಯ ಹಕ್ಕನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್, ಅಕ್ಟೋಬರ್ 17 ರಂದು ವಿಶೇಷ ವಿವಾಹ ಕಾಯ್ದೆಯಡಿ ಸಲಿಂಗ ಜೋಡಿಗಳ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಲು ನಿರಾಕರಿಸಿತು.
* ಸಲಿಂಗ ವಿವಾಹಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ಗೆ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ನಾಲ್ಕು ಪ್ರತ್ಯೇಕ ತೀರ್ಪನ್ನು ನೀಡಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ಸಂಜಯ್ ಕಿಶನ್ ಕೌಲ್, ಎಸ್. ರವೀಂದ್ರ ಭಟ್, ಹಿಮಾ ಕೊಹ್ಲಿ, ಪಿ.ಎಸ್. ನರಸಿಂಹ ಅವರು ತಮ್ಮ ಅನಿಸಿಕೆಗಳನ್ನು ಮಂಡಿಸಿದ್ದಾರೆ.
* ತಮ್ಮದೇ ಲಿಂಗದವರನ್ನು ಜೋಡಿ ಮಾಡಿಕೊಳ್ಳುವ ಹಕ್ಕನ್ನು ಚಾಲ್ತಿಯಲ್ಲಿರುವ ಕಾನೂನುಗಳ ಅಡಿಯಲ್ಲಿ ಪರಿಗಣಿಸಿದ ಸಿಜೆಐ ಮತ್ತು ನ್ಯಾ. ಕೌಲ್ ತತ್ಪರಿಣಾಮವಾಗಿ ಸವಲತ್ತು ಪಡೆಯುವ ಅಂತಹ ಸಲಿಂಗಿ ಜೋಡಿಗಳ ಹಕ್ಕನ್ನು ಎತ್ತಿಹಿಡಿದರು. ಆದರೆ, ಇತರ ಮೂವರು ನ್ಯಾಯಮೂರ್ತಿಗಳು ಸಲಿಂಗಿ ಜೋಡಿಗಳ ಮದುವೆಗೆ ಮಾನ್ಯತೆ ನೀಡಲು ನಿರಾಕರಿಸಿದರು.
* ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ 21 ಅರ್ಜಿಗಳ ವಿಚಾರಣೆ ನಡೆಸಿದ್ದ ಪೀಠವು ತೀರ್ಪು ಪ್ರಕಟಿಸಿದ್ದು, ಪೀಠವು 3:2ರ ಬಹುಮತದ ತೀರ್ಪು ಕೊಟ್ಟಿತು.
* ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಿದ ದೇಶಗಳು
- ನೆದರ್ಲ್ಯಾನ್ಡ್ : 2000 ನೇ ಇಸವಿಯಲ್ಲಿ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಿದ ಜಗತ್ತಿನ ಮೊದಲ ದೇಶ.
- ಬೆಲ್ಜಿಯಂ : 2003 ರಲ್ಲಿ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಿದೆ.
- ಅರ್ಜೆಂಟಿನಾ: ಲ್ಯಾಟಿನ್ ಅಮೆರಿಕದಲ್ಲಿ ಸಲಿಂಗ ವಿವಾಹಕ್ಕೆ ಅವಕಾಶ ನೀಡಿದ ಮೊದಲ ದೇಶ.
- ಬ್ರೆಜಿಲ್ : 2013ರಲ್ಲಿ ಇಲ್ಲಿನ ನ್ಯಾಯಾಲಯವು ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿದೆ
- ಫಿನ್‌ಲ್ಯಾಂಡ್: 2017ರಲ್ಲಿ ಫಿನ್‌ಲ್ಯಾಂಡ್‌ನಲ್ಲಿ ಈ ಕುರಿತ ಕಾನೂನು ಅಸ್ಥಿತ್ವಕ್ಕೆ ಬಂದಿದೆ.
- ಫ್ರಾನ್ಸ್: ನ್ಯಾಯಾಲಯದಲ್ಲಿ ಅರ್ಜಿ ವಜಾಗೊಂಡ ನಂತರ ಫ್ರಾನ್ಸ್ ಮಾಜಿ ಪ್ರಧಾನಿ ಫ್ರಾಂಕೋಸಿಸ್ ಹೊಲಾಂಡ ಕಾನೂನಿಗೆ ಅನುಮೋದನೆ ನೀಡಿದರು.
- ಐರ್ಲೆಂಡ್: 2015ರಲ್ಲಿ ನಡೆದ ಮತದಾನದಲ್ಲಿ ಶೇ 62ರಷ್ಟು ಜನಾಭಿಪ್ರಾಯದ ಮೂಲಕ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿದ ಮೊದಲ ದೇಶ.
- ಬ್ರಿಟನ್: ದಕ್ಷಿಣ ಐರ್ಲೆಂಡ್‌ನಲ್ಲಿ 2020ರಲ್ಲಿ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಲಾಯಿತು. ಸ್ಕಾಟ್‌ಲ್ಯಾಂಡ್‌ನಲ್ಲಿ 2014ರಲ್ಲಿ ಪ್ರತ್ಯೇಕ ಕಾನೂನನ್ನು ಜಾರಿಗೆ ತರಲಾಯಿತು.
- ಅಮೆರಿಕ: ಸುಪ್ರೀಂ ಕೋರ್ಟ್ ದೇಶದಾದ್ಯಂತ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವ ಮೊದಲೇ 36 ರಾಜ್ಯಗಳು ಮತ್ತು ಕೊಲಂಬಿಯಾ ಜಿಲ್ಲೆಯಲ್ಲಿ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಲಾಗಿತ್ತು.
ಬುಧವಾರ, 18 ಅಕ್ಟೋಬರ್ 2023
10:59 ಪೂರ್ವಾಹ್ನ
Daily PDF
ಸುಪ್ರೀಂ ಕೋರ್ಟ್ : ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಇಲ್ಲ
Authored by:
Bhagya R K