* ದೇಶದ ಜಾಗತಿಕ ಕಡಲ ಆರ್ಥಿಕತೆಗೆ ಬಲ ನೀಡುವ ನಿಟ್ಟಿನಲ್ಲಿ 23 ಸಾವಿರ ಕೋಟಿ ಮೊತ್ತದ ಸಮುದ್ರಯಾನ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ.
* ಸಮುದ್ರಯಾನ ಯೋಜನೆಯಿಂದ ಬ೦ದರು ಅಭಿವೃದ್ಧಿ, ಸುಸ್ಥಿರ ಬಳಕೆಗೆ ಉತ್ತೇಜನ ಹಾಗೂ ಅಂತರರಾಷ್ಟ್ರೀಯ ಸಹಯೋಗವನ್ನು ಸುಗಮಗೊಳಿಸುವ ಕಾರ್ಯತಂತ್ರದ ಉಪಕ್ರಮಗಳಿಗೆ ಅನುಗುಣವಾಗಿ ಈ ನೀಲನಕ್ಷೆ ಸಿದ್ಧಪಡಿಸಲಾಗಿದೆ ಎಂದು ತಿಳಿಸಲಾಗಿದೆ.
* ಅಕ್ಟೋಬರ್ 17 ರಿಂದ 19 ರಂದು ಮೂರು ದಿನಗಳ ಕಾಲ ನಡೆಯುವ ಮೂರನೇ ಆವೃತ್ತಿಯ ಜಾಗತಿಕ ಕಡಲ ಭಾರತ ಶೃಂಗಸಭೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಆಗಿ ಚಾಲನೆ ನೀಡಿದರು.
* ಸಮುದ್ರಯಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಂದರುಗಳ ಭವಿಷ್ಯ, ಇಂಗಾಲದ ಡೈಆಕ್ಸೆಡ್ ಹೊರಸೂಸುವಿಕೆ ಪ್ರಮಾಣ ತಗ್ಗಿಸುವಿಕೆ, ಕರಾವಳಿ ಪ್ರದೇಶದಲ್ಲಿ ಹಡಗುಗಳ ರವಾನೆ, ಒಳನಾಡು ಜಲಸಾರಿಗೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಶೃಂಗಸಭೆಯಲ್ಲಿ ಚರ್ಚಿಸಲಾಗುತ್ತದೆ.
ಜಾಗತಿಕ ಕಡಲ ಶೃಂಗಸಭೆ ಆರಂಭ
Published by Akshata Halli
18 ಅಕ್ಟೋಬರ್ 2023