* ರಾಜ್ಯವೊಂದು ಉಪಮುಖ್ಯಮಂತ್ರಿಯನ್ನು ನೇಮಕ ಮಾಡುವುದು ಸಂವಿಧಾನಬಾಹಿರ ಕ್ರಮ ಅಲ್ಲ ಎಂದು ಹೇಳಿರುವ ಸುಪ್ರೀಂ ಕೋರ್ಟ್, ಡಿಸಿಎಂಗಳ ನೇಮಕ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
* ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠವು, 'ಉಪಮುಖ್ಯಮಂತ್ರಿ ಎಂಬುದು ಒಂದು ಹುದ್ದೆಯ ಹೆಸರು ಮಾತ್ರ. ಅವರನ್ನು ಇತರರಿಗಿಂತ ಹಿರಿಯರು ಎಂದು ಪರಿಗಣಿಸುವರೇ ಹೊರತು ಅಧಿಕ ವೇತನವನ್ನೇನೂ ಪಡೆಯುವುದಿಲ್ಲ' ಎಂದು ಅರ್ಜಿದಾರರ ಪರ ವಕೀಲರಿಗೆ ತಿಳಿಸಿತು.
* ಮಹತ್ವದ ನಿರ್ಧಾರವೊಂದರಲ್ಲಿ ಉಪಮುಖ್ಯಮಂತ್ರಿ (ಡಿಸಿಎಂ) ಹುದ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಪರಿಹರಿಸಿದೆ, ಈ ಹುದ್ದೆಯನ್ನು ಸಂವಿಧಾನದಲ್ಲಿ ಸ್ಪಷ್ಟವಾಗಿ ವಿವರಿಸಲಾಗಿಲ್ಲವಾದರೂ ಅದರ ಅಸ್ತಿತ್ವವು ಯಾವುದೇ ಸಾಂವಿಧಾನಿಕ ನಿಬಂಧನೆಗಳನ್ನು ಉಲ್ಲಂಘಿಸುವುದಿಲ್ಲ ಎಂದು ಹೇಳಿದೆ.
ಸುಪ್ರೀಂ ಕೋರ್ಟ್ : ಡಿಸಿಎಂ ಹುದ್ದೆ ಅಸಂವಿಧಾನಿಕವಲ್ಲ
Published by Bhagya R K
14 ಫೆಬ್ರವರಿ 2024