➤ ಎಲಾನ್ ಮಸ್ಕ್ ನೇತೃತ್ವದ ಖಾಸಗಿ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ 'ಸ್ಪೇಸ್‌ಎಕ್ಸ್' (SpaceX) 2026ರ ಸೆಪ್ಟೆಂಬರ್ 28 ರಂದು ತನ್ನ ಮಹತ್ವಾಕಾಂಕ್ಷೆಯ ಸ್ಟಾರ್‌ಶಿಪ್ (Starship) ರಾಕೆಟ್‌ನ 14ನೇ ಪರೀಕ್ಷಾರ್ಥ ಹಾರಾಟವನ್ನು (Flight 14) ಯಶಸ್ವಿಯಾಗಿ ನಡೆಸಿದೆ. ಈ ಹಿಂದಿನ ಪರೀಕ್ಷೆಗಳಿಗಿಂತ ಇದು ತೀರಾ ಭಿನ್ನವಾಗಿದ್ದು, ಸ್ಟಾರ್‌ಶಿಪ್ ನೌಕೆಯನ್ನು ನೇರವಾಗಿ ಭೂಮಿಯ ಕಕ್ಷೆಗೆ (Earth Orbit) ಸೇರಿಸಿದ ಮೊದಲ ಉಡಾವಣೆ ಎಂಬ ಐತಿಹಾಸಿಕ ಮೈಲಿಗಲ್ಲಿಗೆ ಪಾತ್ರವಾಗಿದೆ.
➤ ಮಿಷನ್ ವಿವರಗಳು ಮತ್ತು ಪೆಸಿಫಿಕ್ ಮಹಾಸಾಗರದಲ್ಲಿ ಜಲಸ್ಪರ್ಶ :
- ಉಡಾವಣಾ ಸ್ಥಳ: ಟೆಕ್ಸಾಸ್‌ನ ಬೊಕಾ ಚಿಕಾದಲ್ಲಿರುವ ಸ್ಪೇಸ್‌ಎಕ್ಸ್‌ನ 'ಸ್ಟಾರ್‌ಬೇಸ್' ಉಡಾವಣಾ ಕೇಂದ್ರ.
- ತಲುಪಿದ ಎತ್ತರ: ನೌಕೆಯು ಭೂಮಿಯಿಂದ ಸುಮಾರು 275 ಕಿಲೋಮೀಟರ್ (170 ಮೈಲಿ) ಎತ್ತರದ ಕಕ್ಷೆಯನ್ನು ತಲುಪಿತು.
- ಲ್ಯಾಂಡಿಂಗ್ ಪ್ರಕ್ರಿಯೆ: ಸೂಪರ್‌ಹವಿ ಬೂಸ್ಟರ್ (Super Heavy Booster) ಬೇರ್ಪಟ್ಟ ನಂತರ ಮೆಕ್ಸಿಕೋ ಕೊಲ್ಲಿಯಲ್ಲಿ ಸುರಕ್ಷಿತವಾಗಿ ಇಳಿಯಿತು. ಮುಖ್ಯ ನೌಕೆಯಾದ ಸ್ಟಾರ್‌ಶಿಪ್ ತ ಸಪಾನಯಾಗಿ ತನ್ನ ರ್ಯಾಪ್ಟರ್ (Raptor) ಎಂಜಿನ್ ಬಳಸಿ ಕಕ್ಷೆಯಿಂದ ಕೆಳಗಿಳಿಯುವ (Deorbit Burn) ಪ್ರಕ್ರಿಯೆ ನಡೆಸಿ, ಪೆಸಿಫಿಕ್ ಮಹಾಸಾಗರದಲ್ಲಿ ಯಶಸ್ವಿಯಾಗಿ ಜಲಸ್ಪರ್ಶ (Soft Splashdown) ಮಾಡಿತು.
➤ ಸ್ಟಾರ್‌ಲಿಂಕ್ V3 ಉಪಗ್ರಹಗಳ ಉಡಾವಣೆ: ಈ ಹಾರಾಟದ ಪ್ರಮುಖ ಭಾಗವೆಂದರೆ 26 ಹೊಸ ತಲೆಮಾರಿನ ಸ್ಟಾರ್‌ಲಿಂಕ್ ವಿ-3 (Starlink V3) ಉಪಗ್ರಹಗಳನ್ನು ಕಕ್ಷೆಗೆ ತಲುಪಿಸಿದ್ದು.
- ಹೆಚ್ಚುವರಿ ಇಂಟರ್ನೆಟ್ ಸಾಮರ್ಥ್ಯ: ಈ ಹೊಸ ಉಪಗ್ರಹಗಳು ಸ್ಪೇಸ್‌ಎಕ್ಸ್ ಗ್ಲೋಬಲ್ ಜಾಲಕ್ಕೆ ಸುಮಾರು 26 ಟೆರಾಬೈಟ್ಸ್ (TB) ಹೆಚ್ಚುವರಿ ಇಂಟರ್ನೆಟ್ ವೇಗ ಹಾಗೂ ಸಾಮರ್ಥ್ಯವನ್ನು ಒದಗಿಸಲಿವೆ.
- ಫಾಲ್ಕನ್ 9 ಗಿಂತ 10 ಪಟ್ಟು ಅಧಿಕ: ಸಾಮಾನ್ಯ ಫಾಲ್ಕನ್ 9 (Falcon 9) ರಾಕೆಟ್ ಮಾಡುವ ಕೆಲಸಕ್ಕಿಂತ ಸ್ಟಾರ್‌ಶಿಪ್ ನೌಕೆಯು 10 ಪಟ್ಟು ಹೆಚ್ಚಿನ ತಂತ್ರಜ್ಞಾನ ಹಾಗೂ ಸಾಮರ್ಥ್ಯವನ್ನು ಹೊಂದಿದೆ.
➤ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಮೇಲ್ದರ್ಜೆಗೆ: ಹಿಂದಿನ 13ನೇ ಪರೀಕ್ಷಾರ್ಥ ಹಾರಾಟದಲ್ಲಿದ್ದ ತಾಂತ್ರಿಕ ಸವಾಲುಗಳು ಮತ್ತು ದೋಷಗಳನ್ನು ಆಳವಾಗಿ ಅಧ್ಯಯನ ಮಾಡಿದ್ದ ಸ್ಪೇಸ್‌ಎಕ್ಸ್ ಎಂಜಿನಿಯರ್‌ಗಳು, ಈ ಬಾರಿ ಹಲವು ಪ್ರಮುಖ ಮಾರ್ಪಾಡುಗಳನ್ನು ಮಾಡಿದ್ದರು. ಎಂಜಿನ್ ಜ್ವಲನ ಪ್ರಕ್ರಿಯೆ, ಹೀಟ್ ಶೀಲ್ಡ್ (Heat Shield) ಟೈಲ್ಸ್ ವಿನ್ಯಾಸ ಹಾಗೂ ಸಾಫ್ಟ್‌ವೇರ್ ನಿಯಂತ್ರಣ ವ್ಯವಸ್ಥೆಯಲ್ಲಿ ಮಹತ್ವದ ಅಪ್‌ಗ್ರೇಡ್‌ಗಳನ್ನು ಅಳವಡಿಸಲಾಗಿತ್ತು.
ಮಂಗಳವಾರ, 29 ಸೆಪ್ಟೆಂಬರ್ 2026
4:08 ಅಪರಾಹ್ನ
Daily PDF
ಸ್ಪೇಸ್‌ಎಕ್ಸ್‌ನ ಸ್ಟಾರ್‌ಶಿಪ್ 14ನೇ ಪರೀಕ್ಷಾರ್ಥ ಉಡಾವಣೆ: ಮೊದಲ ಬಾರಿಗೆ ಭೂಕಕ್ಷೆಗೆ ಹೆಜ್ಜೆ ಇಟ್ಟ ಬೃಹತ್ ನೌಕೆ
Authored by:
Akshata Halli