➤ ಗೋವರ್ಧನ್ ಯೋಜನೆ:
ಸಾವಯವ ತ್ಯಾಜ್ಯ ಮತ್ತು ಸಗಣಿಯಿಂದ ಸಂಕುಚಿತ ಜೈವಿಕ ಗ್ಯಾಸ್ (CBG) ತಯಾರಿಕೆಯನ್ನು ಉತ್ತೇಜಿಸಿ, ದೇಶದಲ್ಲಿ ಜೈವಿಕ ಇಂಧನ ಉತ್ಪಾದನೆಯನ್ನು ಹತ್ತು ಪಟ್ಟು ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ₹23,731 ಕೋಟಿ ವೆಚ್ಚದ ‘ಗೋವರ್ಧನ್’ ಯೋಜನೆಯನ್ನು ಆರಂಭಿಸಿದೆ.
➤ ಪ್ರಗತಿ-50 (PRAGATI-50) ಉಪಕ್ರಮ:
ಸ್ವಚ್ಛ ಭಾರತ್ ಮಿಷನ್ ಅರ್ಬನ್ 2.0 ಅಡಿಯಲ್ಲಿ ದೇಶದ 24 ರಾಜ್ಯಗಳ 50 ನಗರಗಳನ್ನು ಘನ ತ್ಯಾಜ್ಯ ಹಾಗೂ ತ್ಯಾಜ್ಯನೀರು ನಿರ್ವಹಣೆಯ ಮಾದರಿ ನಗರಗಳಾಗಿ ಪರಿವರ್ತಿಸಲು 'ಪ್ರಗತಿ-50' ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
➤ ಪ್ರೋಗ್ರಾಮೆಬಲ್ ಡಿಜಿಟಲ್ ರೂಪಾಯಿ (e-₹):
ಬ್ಯಾಂಕ್ ಆಫ್ ಇಂಡಿಯಾ ತನ್ನ ಸಿಬಿಡಿಸಿ (CBDC) ವಾಲೆಟ್ಗಳಲ್ಲಿ ಬಳಕೆದಾರರು ಮಾಸಿಕ ವೆಚ್ಚ ಅಥವಾ ಶಿಕ್ಷಣ ಶುಲ್ಕದಂತಹ ಮರುಕಳಿಸುವ ಪಾವತಿಗಳನ್ನು ನಿಗದಿತ ಅವಧಿಯಲ್ಲಿ ಸ್ವಯಂಚಾಲಿತವಾಗಿ ವರ್ಗಾಯಿಸಲು ಪ್ರೋಗ್ರಾಮೆಬಲ್ ಡಿಜಿಟಲ್ ರೂಪಾಯಿ ಸೌಲಭ್ಯ ಪರಿಚಯಿಸಿದೆ.
➤ 'ಜೈ ಸೇ ವಿಜಯ್' ಸಮರಾಭ್ಯಾಸ:
ಭಾರತೀಯ ಸೇನೆಯು ರಾಜಸ್ಥಾನದ ರಾಜಸ್ಥಾನ-ಪಾಕಿಸ್ತಾನ ಗಡಿ ಸಮೀಪದ ರಾಷ್ಟ್ರೀಯ ಹೆದ್ದಾರಿ 911 ಅನ್ನು ತಾತ್ಕಾಲಿಕ ರನ್ವೇಯಾಗಿ ಬಳಸಿ 'ಜೈ ಸೇ ವಿಜಯ್' ಎಂಬ ವಿಶೇಷ ಹೆಲಿಕಾಪ್ಟರ್ ಲ್ಯಾಂಡಿಂಗ್ ಸಮರಾಭ್ಯಾಸ ನಡೆಸಿದೆ.
➤ ನೌಕಾಪಡೆ ಕಮಾಂಡರ್ಗಳ ಸಮ್ಮೇಳನ:
ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಅವರ ನೇತೃತ್ವದಲ್ಲಿ ನವದೆಹಲಿಯ 'ನೌಸೇನಾ ಭವನ'ದಲ್ಲಿ ನಡೆದ ದ್ವೈವಾರ್ಷಿಕ ಕಮಾಂಡರ್ಗಳ ಸಮ್ಮೇಳನದಲ್ಲಿ ನೌಕಾಪಡೆಯ ಆಧುನೀಕರಣ, ಕೃತಕ ಬುದ್ಧಿಮತ್ತೆ (AI) ಹಾಗೂ ಜಾಗತಿಕ ಸಮುದ್ರ ಭದ್ರತೆಯ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಯಿತು.
➤ 'ಟೇಕ್ಮೀ2ಸ್ಪೇಸ್' - ಕಕ್ಷೀಯ ಡೇಟಾ ಸೆಂಟರ್ ಮಿಷನ್:
ಹೈದರಾಬಾದ್ ಮೂಲದ 'ಟೇಕ್ಮೀ2ಸ್ಪೇಸ್' ಬಾಹ್ಯಾಕಾಶ ಸಂಸ್ಥೆಯು 2028ರ ವೇಳೆಗೆ 'ವೇಮೇಕರ್-2' ರೈಡ್ಶೇರ್ ಮಿಷನ್ ಮೂಲಕ ದೇಶದ ಮೊದಲ ಕಕ್ಷೀಯ ಡೇಟಾ ಸೆಂಟರ್ (Orbital Data Centre) ಉಪಗ್ರಹಗಳನ್ನು ಉಡಾವಣೆ ಮಾಡಲು ಯೋಜನೆ ರೂಪಿಸಿದೆ.
➤ 'ಕಾಝಿಂದ್' (KAZIND) ಜಂಟಿ ಸಮರಾಭ್ಯಾಸ:
ಭಾರತ ಮತ್ತು ಕಜಕಿಸ್ತಾನ್ ಸೇನೆಗಳ ನಡುವಿನ ಜಂಟಿ ಮಿಲಿಟರಿ ಸಮರಾಭ್ಯಾಸ 'ಕಾಝಿಂದ್'ನ ನೂತನ ಆವೃತ್ತಿಯು ಕಜಕಿಸ್ತಾನದಲ್ಲಿ ಆರಂಭವಾಗಿದ್ದು, ಭಾರತೀಯ ಸಶಸ್ತ್ರ ಪಡೆಗಳ 60 ಯೋಧರ ತಂಡ ಪಾಲ್ಗೊಂಡಿದೆ.
➤ 'ವರುಣ' ದ್ವಿಪಕ್ಷೀಯ ನೌಕಾ ಸಮರಾಭ್ಯಾಸ:
ಭಾರತ ಮತ್ತು ಫ್ರಾನ್ಸ್ ನೌಕಾಪಡೆಗಳ ನಡುವಿನ ದ್ವಿಪಕ್ಷೀಯ ನೌಕಾ ಸಮರಾಭ್ಯಾಸ 'ವರುಣ'ದ 24ನೇ ಆವೃತ್ತಿಯು ಫ್ರಾನ್ಸ್ನಲ್ಲಿ ನಡೆದಿದ್ದು, ಭಾರತೀಯ ನೌಕಾಪಡೆಯ ಐಎನ್ಎಸ್ ತ್ರಿಶೂಲ್ (INS Trishul) ಭಾಗವಹಿಸಿತ್ತು.
ಸ್ಪರ್ಧಾ ಕೋಶ್: 05-10-2026
Published by Akshata Halli
05 ಅಕ್ಟೋಬರ್ 2026