➤ ಹರ್ಮುಜ್ ಜಲಸಂಧಿ ತೆರೆಯಲು ಇರಾನ್ ಕಠಿಣ ಷರತ್ತು: ಅಮೆರಿಕದೊಂದಿಗಿನ ಮಧ್ಯಂತರ ಒಪ್ಪಂದದಲ್ಲಿ ವಿಧಿಸಲಾದ ಏಳು ಪ್ರಮುಖ ಶರತ್ತುಗಳನ್ನು ಪೂರೈಸುವವರೆಗೆ ಹರ್ಮುಜ್ ಜಲಸಂಧಿಯನ್ನು ತೆರೆಯುವುದಿಲ್ಲ ಎಂದು ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಖೇರ್ ಖಾಲಿಬಾಫ್ ಸ್ಪಷ್ಟಪಡಿಸಿದ್ದಾರೆ.
➤ ಏಷ್ಯನ್ ಗೇಮ್ಸ್ ಸಾಧಕಿ ಪ್ರಣವಿ ಅರಸ್‌ಗೆ ಐಜಿಯು ನಗದು ಬಹುಮಾನ: 2026ರ ಏಷ್ಯನ್ ಗೇಮ್ಸ್‌ನ ಗಾಲ್ಫ್‌ನಲ್ಲಿ ಭಾರತಕ್ಕೆ ಚೊಚ್ಚಲ ಮಹಿಳಾ ವೈಯಕ್ತಿಕ ಚಿನ್ನದ ಪದಕ ತಂದಿತ್ತ ಪ್ರಣವಿ ಅರಸ್ ಅವರಿಗೆ 10 ಲಕ್ಷ ರೂ. ಹಾಗೂ ಬೆಳ್ಳಿ ಪದಕ ಗೆದ್ದ ಮಹಿಳಾ ತಂಡದ ಸದಸ್ಯರಾದ ಅದಿತಿ ಅಶೋಕ್ ಮತ್ತು ದೀಕ್ಷಾ ದಾಗರ್‌ಗೆ ತಲಾ 3 ಲಕ್ಷ ರೂ. ನಗದು ಬಹುಮಾನವನ್ನು ಇಂಡಿಯನ್ ಗಾಲ್ಫ್ ಯೂನಿಯನ್ (IGU) ಘೋಷಿಸಿದೆ.
➤ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ ಸಾಹಸಕ್ಕೆ ಇಸ್ರೇಲ್ ಪ್ರಧಾನಿ ಶ್ಲಾಘನೆ: ಇಸ್ರೇಲ್‌ಗೆ ಪ್ರಯಾಣಿಸುತ್ತಿದ್ದ ವಿಮಾನವನ್ನು ಪತನಗೊಳಿಸಲು ಸಹ-ಪೈಲಟ್ ಮಾಡಿದ ಸಂಚನ್ನು ವಿಫಲಗೊಳಿಸಿ 180 ಪ್ರಯಾಣಿಕರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಅವರನ್ನು 'ಇಡೀ ವಿಶ್ವದ ನಾಯಕ (Hero of the entire world)' ಎಂದು ಬಣ್ಣಿಸಿದ್ದಾರೆ.
➤ ರಷ್ಯಾ-ಉಕ್ರೇನ್ ಸಂಘರ್ಷ ಶಮನಕ್ಕೆ ಭಾರತ ಸಕ್ರಿಯ ಯತ್ನ: ಜೈಶಂಕರ್: ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷವನ್ನು ಶಮನಗೊಳಿಸಲು ಭಾರತವು ಕೇವಲ ಶಾಂತಿ ಸಲಹೆಗಷ್ಟೇ ಸೀಮಿತವಾಗದೆ, ರಾಜತಾಂತ್ರಿಕ ಮಾರ್ಗದ ಮೂಲಕ ಪರಿಹಾರ ಕಂಡುಕೊಳ್ಳಲು ವಿಶ್ವದ ವಿವಿಧ ನಾಯಕರೊಂದಿಗೆ ಸತತ ಸಂಪರ್ಕದಲ್ಲಿದ್ದು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
➤ ಭದೋಹಿ ಜಿಲ್ಲೆಗೆ 'ಸಂತ ರವಿದಾಸ ನಗರ ಭದೋಹಿ' ಎಂದು ಮರುನಾಮಕರಣ: ಉತ್ತರ ಪ್ರದೇಶದ ಭದೋಹಿ ಜಿಲ್ಲೆಯನ್ನು ಇನ್ನು ಮುಂದೆ 'ಸಂತ ರವಿದಾಸ ನಗರ ಭದೋಹಿ' ಎಂದು ಮರುನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಭಾನುವಾರ (04-10-2026) ಪ್ರಕಟಿಸಿದ್ದಾರೆ.