* ಶ್ರೀಲಂಕಾದ ಮಾಜಿ ನಾಯಕ ಸನತ್ ಜಯಸೂರ್ಯ ಅವರು ಶ್ರೀಲಂಕಾ ದೇಶದ ರಾಷ್ಟ್ರೀಯ ಪುರುಷರ ಕ್ರಿಕೆಟ್ ತಂಡದ ಹಂಗಾಮಿ ಮುಖ್ಯ ಕೋಚ್ ಆಗಿ ಜುಲೈ 8 ರಂದು ನೇಮಕಗೊಂಡಿದ್ದಾರೆ.
* ಪ್ರಸ್ತುತ ಎಸ್‌ಎಲ್‌ಸಿಯ ಕ್ರಿಕೆಟ್ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿರುವ ಜಯಸೂರ್ಯ ಅವರು ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ಹೊಸ ಕೆಲಸವನ್ನು ವಹಿಸಿಕೊಳ್ಳಲಿದ್ದಾರೆ.
* ಪ್ರವಾಸಿ ಭಾರತ ತಂಡದ ವಿರುದ್ಧ ಜುಲೈ 27 ರಂದು ಆರಂಭವಾಗಲಿರುವ ಮೂರು ಪಂದ್ಯಗಳ ಟಿ20 ಸರಣಿಯ ಜತೆಗೆ ತಾತ್ಕಾಲಿಕವಾಗಿ ಅವಧಿಗೆ ಶ್ರೀಲಂಕಾ ತಂಡದ ಹಂಗಾಮಿ ಮುಖ್ಯಕೋಚ್ ಆಗಿ ನೇಮಕಗೊಡ್ಡಿದ್ದಾರೆ.
* ನಿರ್ಗಮಿತ ಕೋಚ್ ಕ್ರಿಸ್ ಸಿಲ್ವರ್ ವುಡ್ ಅವರಿಂದ ತೆರವಾಗಿರುವ ಸ್ಥಾನವನ್ನು ಜಯಸೂರ್ಯ ತುಂಬಲಿದ್ದಾರೆ ಎಂದು ಶ್ರೀಲಂಕಾದ ಕ್ರಿಕೆಟ್ ಮಂಡಳಿ ತಿಳಿಸಿದೆ.
* ವಿಶ್ವಕಪ್ ನಲ್ಲಿ ತಂಡದ ಸಲಹೆಗಾರರಾಗಿದ್ದ ಜಯಸೂರ್ಯ ಅವರು ಮುಖ್ಯ ಆಯ್ಕೆಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ.
* ಆಗಸ್ಟ್ - ಸೆಪ್ಟೆಂಬರ್ ನಲ್ಲಿ ಇಂಗ್ಲೆಂಡಿನಲ್ಲಿ ನಡೆಯಲಿರುವ 3 ಪಂದ್ಯಗಳ ಟೆಸ್ಟ್ ಸರಣಿಯವರೆಗೂ ಜಯಸೂರ್ಯ ಅವರು ಹಂಗಾಮಿ ಕೋಚ್ ಆಗಿ ಮುಂದುವರಿಸಲಿದ್ದಾರೆ.
ಮಂಗಳವಾರ, 09 ಜುಲೈ 2024
11:13 ಪೂರ್ವಾಹ್ನ
Daily PDF
ಸನತ್ ಜಯಸೂರ್ಯ ಶ್ರೀಲಂಕಾದ ಹಂಗಾಮಿ ಮುಖ್ಯ ಕೋಚ್ ಆಗಿ ನೇಮಕ
Authored by:
Yallamma G