* ಭಾರತೀಯ ವಾಯು ಸೇನೆಯ ಕ್ಯಾಪ್ಟನ್ ಸುಪ್ರಿತಾ ಸಿ.ಟಿ. ಅವರು ಪ್ರಪಂಚದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್‌ನಲ್ಲಿ ಕರ್ತವ್ಯ ನಿರ್ವಹಿಸಲು ಆಯ್ಕೆಯಾಗಿದ್ದಾರೆ. ಸಿಯಾಚಿನ್‌ನಲ್ಲಿ ಕರ್ತವ್ಯ ನಿರ್ವಹಿಸಲು ಆಯ್ಕೆಯಾಗಿರುವ ಮೊದಲ ಮಹಿಳಾ ಯೋಧೆ ಎಂಬ ಖ್ಯಾತಿ ಗಳಿಸಿದ್ದಾರೆ.
* ಇವರು ಮೈಸೂರಿನ ವಲ್ಲಭಾಯಿ ನಗರದ ನಿವಾಸಿಯಾಗಿದ್ದಾರೆ. ತಲಕಾಡು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಎಸ್‌ಐ ತಿರುಮಲ್ಲೇಶ್, ನಿರ್ಮಲಾ ದಂಪತಿ ಪುತ್ರಿ ಸುಪ್ರಿತಾ. ಮೈಸೂರಿನ ಜೆಎಸ್‌ಎಸ್ ಕಾಲೇಜಿನಲ್ಲಿ ಎಲ್‌ಎಲ್‌ಬಿ ಪದವಿ ಹಾಗೂ ಎನ್‌ಸಿಸಿ ಸರ್ಟಿಫಿಕೇಟ್ ಪಡೆದುಕೊಂಡಿದ್ದಾರೆ.
* 2021ರಲ್ಲಿ ಸೇನಾ ಪಡೆಯಲ್ಲಿ ಲೆಫ್ಟಿನೆಂಟ್ ಆಗಿ ಆಯ್ಕೆಯಾಗಿ ತರಬೇತಿಯ ನಂತರ ವಾಯುಪಡೆಗೆ ನಿಯೋಜನೆಯಾಗಿದ್ದರು.
* 2024ರಲ್ಲಿ ಪತಿ ಮೇಜರ್ ಜೆರ್ರಿ ಬ್ರೇಜ್ ಅವರೊಂದಿಗೆ ರಾಜಪಥ್ ಪೆರೇಡ್‌ನಲ್ಲಿ ಭಾಗವಹಿಸಿದ್ದರು.
* ಅನಂತನಾಗ್, ಜಬಲ್ಪುರ್ ಹಾಗೂ ಲೇಪ್‌ನಲ್ಲಿ ಕರ್ತವ್ಯ ನಿರ್ವಹಿಸಿದ ಬಳಿಕ ಕಠಿಣ ತರಬೇತಿಯಲ್ಲಿ ಉತ್ತೀರ್ಣರಾಗಿ ಸುಪ್ರಿತಾ ಸಿ.ಟಿ ಅವರು ಸಿಯಾಚಿನ್‌ಗೆ ಆಯ್ಕೆಯಾಗಿದ್ದಾರೆ.
* ಸಿಯಾಚಿನ್ ಅತಿ ಕಡಿಮೆ ಉಷ್ಣಾಂಶದ ಪ್ರದೇಶ. ಸದಾ ಹಿಮಗಡ್ಡೆಯಿಂದ ಆವೃತವಾಗಿರುವ ಇಲ್ಲಿ ಕಾರ್ಯನಿರ್ವಹಿಸುವುದು ಅತ್ಯಂತ ಕಠಿಣ ಸವಾಲಾಗಿದೆ.
ಬುಧವಾರ, 24 ಜುಲೈ 2024
3:46 ಅಪರಾಹ್ನ
Daily PDF
ಸಿಯಾಚಿನ್ ಯುದ್ಧಭೂಮಿಗೆ ಮೊದಲ ಮಹಿಳಾ ಯೋಧೆಯಾಗಿ ಮೈಸೂರಿನ ಸುಪ್ರಿತಾ ಆಯ್ಕೆ
Authored by:
Yallamma G