* ಸಿನ್ಸಿನಾಟಿ ಓಪನ್’ ಟೆನಿಸ್ ಪಂದ್ಯಾವಳಿಯಲ್ಲಿ ವಿಶ್ವದ ನಂ.1 ಆಟಗಾರ ಇಟಲಿಯ ಜಾನಿಕ್ ಸಿನ್ನರ್ ಮತ್ತು ಬೆಲರೂಸ್‌ನ ಅರಿನಾ ಸಬಲೆಂಕಾ ಅವರು ಆಗಸ್ಟ್ 20 ರಂದು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡರು..
* ವಿಶ್ವದ ಅಗ್ರಮಾನ್ಯ ಆಟಗಾರ ಸಿನ್ನರ್ ಸಬಲೆಂಕಾ ಅವರು ಫೈನಲ್ ಹಣಾಹಣಿಯಲ್ಲಿ 7-6 (7/4), 6-2ರ ನೇರ ಸೆಟ್‌ಗಳಿಂದ ಅಮೆರಿಕದ ಫ್ರಾನ್ಸಿಸ್ ಟಿಯಾಫೊ ಅವರನ್ನು ಸೋಲಿಸಿದರು. ವನಿತಾ ಸಿಂಗಲ್ಸ್‌ನಲ್ಲಿ ಅರಿನಾ ಸಬಲೆಂಕಾ 6-3, 7-5ರಿಂದ ಜೆಸ್ಸಿಕಾ ಪೆಗುಲಾ ಆಟವನ್ನು ಕೊನೆಗಾಣಿಸಿದರು.
* ಸೆಮಿಫೈನಲ್‌ನಲ್ಲಿ ಯಾವುದೇ ಶ್ರೇಯಾಂಕ ಹೊಂದಿಲ್ಲದ ಫ್ರಾನ್ಸೆಸ್ ಥಿಯಾಫೊ ಅವರು 4-6, 6-1, 7-6 (4) ಅಂತರದಿಂದ ಡೆನ್ಮಾರ್ಕ್‌ನ ಹೋಲ್ಜರ್ ರುನೆ ವಿರುದ್ಧ ಜಯ ಸಾಧಿಸಿದರು. ಥಿಯಾಫೊ 2013ರ ಬಳಿಕ ಸಿನ್ಸಿನಾಟಿ ಫೈನಲ್ ತಲುಪಿದ ಅಮೆರಿಕದ ಮೊದಲ ಆಟಗಾರ. ಅಂದು ಜಾನ್ ಇಸ್ನರ್ ಪ್ರಶಸ್ತಿ ಸುತ್ತಿಗೆ ಏರಿದ್ದರು.
* 2008ರ ಬಳಿಕ ಸಿನ್ನಿನಾಟಿ ಪ್ರಶಸ್ತಿ ಗೆದ್ದ ಅತ್ಯಂತ ಕಿರಿಯ ವಯಸ್ಸಿನ ಆಟಗಾರ ಎಂಬ ಹೆಗ್ಗಳಿಕೆಗೆ ಸಿನ್ನರ್ ಪಾತ್ರವಾದರು. 16 ವರ್ಷಗಳ ಹಿಂದೆ 21 ವರ್ಷ ವಯಸ್ಸಿನಲ್ಲಿ ಇಂಗ್ಲೆಂಡ್‌ನ ಆ್ಯಂಡಿ ಮರ್ರೆ ಢಾಂಪಿಯನ್ ಆಗಿ ದಾಖಲೆ ನಿರ್ಮಿಸಿದ್ದಾರೆ.
ಸಿನ್ಸಿನಾಟಿ ಓಪನ್ ಟೆನಿಸ್ ಟೂರ್ನಿ : ಸಿನ್ನರ್ ಸಬಲೆಂಕಾಗೆ ಚಾಂಪಿಯನ್ ಕಿರೀಟ್
Published by Bhagya R K
21 ಆಗಸ್ಟ್ 2024