* ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ವ್ಯಾಪ್ತಿಯ ವಿಶ್ವವಿದ್ಯಾಲಯಗಳಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರ ವಿವೇಚನೆಯಂತೆ 250 ಕೋಟಿ ವೆಚ್ಚ ಮಾಡುವ ಪ್ರಸ್ತಾವಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.
* ಈ ಯೋಜನೆ ಅನುಷ್ಠಾನಗೊಳಿಸಲು ರಾಜ್ಯಪಾಲರ ವಿವೇಚನಾ ಕೋಟವನ್ನು ಇದೇ ಮೊದಲ ಬಾರಿಗೆ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶಿಫಾರಸಿ ನಂತೆ ಈ ತೀರ್ಮಾನ ಕೈಗೊಳ್ಳಲಾಗಿದೆ.
* ಮಂಡಳಿ ವ್ಯಾಪ್ತಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ಒಟ್ಟು 41 ವಿಧಾನಸಭಾ ಕ್ಷೇತ್ರಗಳಿವೆ.
* ಈ ಜಿಲ್ಲೆಗಳಲ್ಲಿ ಪ್ರಸಕ್ತ ಸಾಲಿನಲ್ಲಿ (2024- 25) 5 ಸಾವಿರ ಕೋಟಿಗೆ ಕ್ರಿಯಾಯೋಜನೆ ರೂಪಿಸಲಾಗಿತ್ತು, ಆದರೆ, ಬಜೆಟ್‌ನಲ್ಲಿ 3 ಸಾವಿರ ಕೋಟಿ ಮಾತ್ರ ಒದಗಿಸಲಾಗಿದೆ.
* 5 ಸಾವಿರ ಕೋಟಿಯಲ್ಲಿ 3.750 ಕೋಟಿಯನ್ನು ಕಲ್ಯಾಣ ಕರ್ನಾಟಕ ಪ್ರದೇಶದ ವ್ಯಾಪ್ತಿಯ ಜಿಲ್ಲೆ ಮತ್ತು 19 ತಾಲ್ಲೂಕುಗಳಿಗೆ ವರ್ಗ ಅಭಿವೃದ್ಧಿ ಸೂಚ್ಯಂಕ (ಸಿಡಿಐ) ಆಧರಿಸಿ ಕ್ರಿಯಾ ಯೋಜನೆಗಳನ್ನು ರೂಪಿಸಲು ಅನುದಾನ ಹಂಚಿಕೆ ಮಾಡಲಾಗಿದೆ.
* ಪ್ರಸಕ್ತ ಸಾಲಿನಲ್ಲಿ ಬಜೆಟ್‌ನಲ್ಲಿ ಘೋಷಿಸಿದ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಒಟ್ಟು 11 ಇಲಾಖೆಗಳಿಗೆ 1 ಸಾವಿರ ಕೋಟಿ ನಿಗದಿಪಡಿಸಲಾಗಿದೆ. ಉನ್ನತ ಶಿಕ್ಷಣ ವಲಯದಲ್ಲಿ ರಾಜ್ಯಪಾಲರು ಸೂಚಿಸುವ ಯೋಜನೆಗಳಿಗೆ ₹250 ಕೋಟಿಯನ್ನು ಕೆಕೆಆರ್‌ಡಿಬಿಯ ಶಿಫಾರಸಿನಂತೆ ವೆಚ್ಚ ಮಾಡಲು ನಿಗದಿಪಡಿಸಲಾಗಿದೆ ಎಂದು ಮಂಡಳಿಯ ಮೂಲಗಳು ಹೇಳಿವೆ.
* 2024 - 25 ನೇ ಸಾಲಿಗೆ ಕೆಕೆಆರ್ ಡಿಬಿ ಕ್ರಿಯಾ ಯೋಜನೆ
- ಒಟ್ಟು ಅನುದಾನ 5,000 ಕೋಟಿ (ಬಜೆಟ್ ನಲ್ಲಿ ಮಂಜೂರು ಆಗಿರುವುದು 3,000 ಕೋಟಿ ಮಾತ್ರ )
- 3,750 ಕೋಟಿ ಮೈಕ್ರೋ ಮೈಕ್ರೋ ಯೋಜನೆಗೆ
- 1,000 ಕೋಟಿ 11 ಇಲಾಖೆಗಳಿಗೆ ಹಂಚಿಕೆ
- 250 ಕೋಟಿ ರಕ್ಯಪಾಲರ ವಿವೇಚನೆಗೆ ಮೊತ್ತ
ಬುಧವಾರ, 21 ಆಗಸ್ಟ್ 2024
1:05 ಅಪರಾಹ್ನ
Daily PDF
ಕೆಕೆಆರ್ ಡಿಬಿ ವಿವೇಚನಾ ಕೋಟಾ : ರಾಜ್ಯಪಾಲರಿಗೆ 250 ಕೋಟಿ
Authored by:
Bhagya R K