* ಸಿಂಗಾಪುರದ ಪ್ರಧಾನಿ ಸ್ಥಾನದಿಂದ ಪ್ರಧಾನಿ ಲೀ ಸೀಯೆನ್ ಲೂಂಗ್ ಅವರು ಅಧಿಕಾರದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ. ಹಾಗೂ ಉಪ ಪ್ರಧಾನಿ ಲಾರೆನ್ಸ್ ವಾಂಗ್ ಅವರು ಸಿಂಗಪುರದ ಮುಂದಿನ ಪ್ರಧಾನಿಯಾಗಲಿದ್ದಾರೆ.
* ‘2024ರ ಮೇ 15ರಂದು ಪ್ರಧಾನಿ ಸ್ಥಾನ ತೊರೆಯಲಿದ್ದೇನೆ. ಲಾರೆನ್ಸ್ ವಾಂಗ್ ಅವರು ಅದೇ ದಿನ ಮುಂದಿನ ಪ್ರಧಾನಿಯಾಗಿ ಅಧಿಕಾರಕ್ಕೇರಲಿದ್ದಾರೆ’ ಎಂದು ತಿಳಿಸಿದ್ದಾರೆ.
* ಹಣಕಾಸು ಸಚಿವರಾಗುವ ವಾಂಗ್ ಅವರನ್ನು ಲೀ ಅವರ ವಾರಸುದಾರರನ್ನಾಗಿ ಪೀಪಲ್ಸ್ ಆಯಕ್ಷನ್ ಪಕ್ಷದ (ಪಿಎಪಿ) ಸಂಸದರು 2022ರಲ್ಲೇ ಆಯ್ಕೆ ಮಾಡಿದ್ದಾರೆ. ಸಿಂಗಪುರಕ್ಕೆ 1965ರಲ್ಲಿ ಸ್ವಾತಂತ್ರ್ಯ ಬಂದಾಗಿನಿಂದಲೂ ಈ ಪಕ್ಷವೇ ಅಧಿಕಾರದಲ್ಲಿದೆ.
* ಲೀ ಸೀಯೆನ್ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿರುವ ವಾಂಗ್ ಅವರು 'ಈ ಜವಾಬ್ದಾರಿಯನ್ನು ಅತ್ಯಂತ ವಿನಯದಿಂದ ಹಾಗೂ ಕರ್ತವ್ಯ ಪ್ರಜ್ಞೆಯಿಂದ ಸ್ವೀಕರಿಸುತ್ತೇನೆ.
* 93 ಸ್ಥಾನಗಳಿಗೆ 2020ರಲ್ಲಿ ನಡೆದ ಚುನಾವಣೆಯಲ್ಲಿ ಪಿಎಪಿ 23 ಕಡೆ ಗೆಲುವು ಸಾಧಿಸಿತ್ತು. ಕಾಳಿದ 10 ಸ್ನಾನಗಳು ವಿರೋಧ ಪಕ್ಷವಾದ ವರ್ಕರ್ಸ್ ಪಾರ್ಟಿ ಪಾಲಾಗಿದ್ದವು.
ಮಂಗಳವಾರ, 16 ಎಪ್ರಿಲ್ 2024
11:26 ಪೂರ್ವಾಹ್ನ
Daily PDF
ಸಿಂಗಾಪುರದ ಪ್ರಧಾನಿ ಸ್ಥಾನದಿಂದ ಕೆಳಗಿಳಿಯುವುದಾಗಿ ಲೀ ಘೋಷಣೆ
Authored by:
Bhagya R K