* ಬೆಂಗಳೂರಿನ ಚಿನ್ನಸ್ವಾಮಿ ಕ್ರೀಂಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ (RCB) ವಿರುದ್ಧ ಎಸ್‌ಆರ್‌ಎಚ್ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಸ್ಫೋಟಕ ಶತಕ, ಹೆನ್ರಿಕ್ ಕ್ಲಾಸೆನ್ ಮಿಂಚಿನ ಅರ್ಧಶತಕದೊಂದಿಗೆ ಬ್ಯಾಟರ್‌ಗಳರು ಸಿಕ್ಸರ್, ಬೌಂಡರಿ ಸಿಡಿಸಿದ ಪರಿಣಾಮ ಸನ್ ರೈಸರ್ಸ್ ಹೈದರಾಬಾದ್ ಐಪಿಎಲ್‌ನಲ್ಲಿ (IPL) ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದೆ.
* ಮೂರು ವಿಕೆಟ್ ನಷ್ಟಕ್ಕೆ 287 ರನ್ ಹೊಡೆಯುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಸಿಡಿಸಿದ್ದ ತನ್ನದೇ ದಾಖಲೆಯನ್ನ ಎಸ್‌ಆರ್‌ಹೆಚ್ ಪುಡಿ ಪುಡಿ ಮಾಡಿದೆ. ಅಲ್ಲದೇ ಅತಿಹೆಚ್ಚು ರನ್ ಗಳಿಸಿದ್ದ ಆರ್‌ಸಿಬಿ ದಾಖಲೆಯನ್ನು ಆರ್‌ಸಿಬಿ (RCB) ವಿರುದ್ಧವೇ ನುಚ್ಚುನೂರು ಮಾಡಿದೆ.
* ಟ್ರಾವಿಸ್ ಹೆಡ್ ಐಪಿಎಲ್ ಇತಿಹಾಸದಲ್ಲೇ ನಾಲ್ಕನೇ ವೇಗದ ಶತಕ ಸಿಡಿಸಿ ಮಿಂಚಿದರು.ಸನ್‌ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಟ್ರಾವಿಸ್ ಹೆಡ್ ಬೌಂಡರಿ, ಸಿಕ್ಸರ್‌ಗಳ ಸುರಿ ಮಳೆ ಹರಿಸಿದರು.
* ಕೇವಲ 39 ಎಸೆತಗಳಲ್ಲಿ ಶತಕ ಸಿಡಿಸಿದ ಇವರು ಐಪಿಎಲ್ ಟೂರ್ನಿಯಲ್ಲಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ವಿಶ್ವದ ಶ್ರೀಮಂತ ಫ್ರಾಂಚೈಸಿ ಲೀಗ್‌ನಲ್ಲಿ ನಾಲ್ಕನೇ ವೇಗದ ಶತಕ ಸಿಡಿಸಿದರು. ಐಪಿಎಲ್ ಇತಿಹಾಸದಲ್ಲಿಯೇ ಮತ್ತೊಮ್ಮೆ ಅತಿ ಹೆಚ್ಚು ರನ್ ಸಿಡಿಸಿದ ತಂಡ ಸನ್‌ರೈಸರ್ಸ್ ಹೈದರಾಬಾದ್ ತಂಡವಾಗಿದೆ.
* ಮೊದಲ ವಿಕೆಟಿಗೆ 8.1 ಓವರ್‌ಗಳಲ್ಲಿ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಜೋಡಿ ಬರೋಬ್ಬರಿ 108 ರನ್ ಬಾರಿಸಿತ್ತು. ಅಭಿಷೇಕ್ ಶರ್ಮಾ 22 ಎಸೆತಗಳಲ್ಲಿ 34 ರನ್ ಗಳಿಸಿ ಔಟಾಗುತ್ತಿದ್ದಂತೆ, ಕ್ರೀಸ್‌ಗೆ ಬಂದ ಹೆನ್ರಿಕ್ ಕ್ಲಾಸೆನ್, ಟ್ರಾವಿಡ್ ಹೆಡ್ ಜೊತೆಗೂಡಿ ಆರ್‌ಸಿಬಿ ಬೌಲರ್‌ಗಳನ್ನ ಶುರು ಮಾಡಿದರು.
* ಟ್ರಾವಿಸ್ ಹೆಡ್ ಕೇವಲ 41 ಎಸೆತಗಳಲ್ಲಿ 102 ರನ್ (8 ಸಿಕ್ಸರ್, 9 ಬೌಂಡರಿ) ಚಚ್ಚಿದರೆ, ಹೆನ್ರಿಕ್ ಕ್ಲಾಸೆನ್ 31 ಎಸೆತಗಳಲ್ಲಿ 67 ರನ್ (7 ಸಿಕ್ಸರ್, 2 ಬೌಂಡರಿ) ಸಿಡಿಸಿ ಪೆವಿಲಿಯನ್‌ಗೆ ಮರಳಿದರು.
* ಇದರೊಂದಿಗೆ ಏಡನ್ ಮಾರ್ಕ್ರಮ್ ಸ್ಫೋಟಕ 32 ರನ್, ಅಬ್ದುಲ್ ಸಮದ್ ಕೇವಲ 10 ಎಸೆತಗಳಲ್ಲಿ 37 ರನ್ ಚಚ್ಚಿ ತಮ್ಮದೇ ತಂಡದ ದಾಖಲೆ ಮುರಿಯುವಲ್ಲಿ ಯಶಸ್ವಿಯಾದರು.
RCBಗೆ ‘ಹೆಡ್ಡೇಕ್’- ತನ್ನದೇ ದಾಖಲೆ ಮುರಿದು IPLನಲ್ಲಿ ಮತ್ತೆ ಇತಿಹಾಸ ನಿರ್ಮಿಸಿದ ಹೈದರಾಬಾದ್
Published by Bhagya R K
16 ಏಪ್ರಿಲ್ 2024