* ಭಾರತದ ರಿಧಮ್ ಸಂಗ್ವಾನ್ ಅವರು ISSF ವಿಶ್ವಕಪ್ (ಪಿಸ್ತೂಲ್ ಮತ್ತು ರೈಫಲ್) ಶೂಟಿಂಗ್ ಟೋರ್ನಿಯಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
* ಅಜರ್‌ಬೈಜಾನ್‌ನ ಬಾಕುವಿನಲ್ಲಿ ನಡೆಯುತ್ತಿರುವ ISSF ವಿಶ್ವಕಪ್ (ಪಿಸ್ತೂಲ್ ಮತ್ತು ರೈಫಲ್) ಶೂಟಿಂಗ್ ಟೋರ್ನಿಯಲ್ಲಿ ಮಹಿಳೆಯರ 10 ಮೀಟರ್ಸ್ ಏರ್ ಪಿಸ್ತೂಲ್ ವಿಭಾಗದಲ್ಲಿ ಭಾರತದ ರಿಧಮ್ ಸಂಗ್ವಾನ್ ಅವರು ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
* ಫೈನಲ್‌ನಲ್ಲಿ ರಿಧಮ್ 219.1 ಪಾಯಿಂಟ್ಸ್ ಗಳಿಸಿದರು. ಗ್ರೀಸ್‌ನ ಅನ್ನಾ ಕೊರಾಕಾಕಿ (2413 ಪಾಯಿಂಟ್ಸ್) ಚಿನ್ನ ಮತ್ತು ಉಕ್ರೇನ್‌ನ ಒಲೆನಾ ಕೊಸೈವಿಚ್ (240.6) ಬೆಳ್ಳಿ ಜಯಿಸಿದರು.
* 10 ಮೀಟರ್ಸ್ ಏರ್ ಪಿಸ್ತೂಲ್ ವಿಭಾಗಗಳಲ್ಲಿ ಫೈನಲ್ಸ್ ತಲುಪಿದ್ದ ಸರಭೋತ್ ಸಿಂಗ್ ಮತ್ತು ಇಶಾ ಸಿಂಗ್ ಪದಕ ತಪ್ಪಿಸಿಕೊಂಡರು.
* ಇಶಾ ಆರನೇ ಸ್ಥಾನ ಗಳಿಸಿದರೆ, ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ದಿವ್ಯಾ ಟಿ.ಎಸ್. ಅವರು17ನೇ ಸ್ಥಾನ ಗಳಿಸಿದರು.
ಶೂಟಿಂಗ್ ವಿಶ್ವಕಪ್ : ಭಾರತದ ರಿಧಮ್ ಗೆ ಕಂಚು
Published by Yallamma G
11 ಮೇ 2023