* ಶ್ರೀಲಂಕಾದ (Sri Lanka) ನೂತನ ಪ್ರಧಾನಿಯಾಗಿ (Prime Minister) 54 ವರ್ಷದ ನ್ಯಾಷನಲ್ ಪೀಪಲ್ಸ್ ಪವರ್(ಎನ್‌ಪಿಪಿ) ಪಕ್ಷದ ನಾಯಕಿ ಹರಿಣಿ ಅಮರಸೂರ್ಯ (Harini Amarsuriya) ಅವರು ಮಂಗಳವಾರ (ಸೆ.24) ಪ್ರಮಾಣ ವಚನ ಸ್ವೀಕರಿಸಿದ್ದಾರೆ.
* 1994 ರಲ್ಲಿ ದಿವಂಗತ ಸಿರಿಮಾವೊ ಬಂಡಾರನಾಯಕೆ ಅಧಿಕಾರ ವಹಿಸಿಕೊಂಡ ನಂತರ ಶ್ರೀಲಂಕಾದ ಮೊದಲ ಮಹಿಳಾ ಪ್ರಧಾನಿ ಮತ್ತು ದೇಶದ ಇತಿಹಾಸದಲ್ಲಿ ಮೂರನೇ ಮಹಿಳಾ ಪ್ರಧಾನಿಯಾಗಿದ್ದಾರೆ.
* ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದ್ದ 56 ವರ್ಷದ ಅನುರಾ ಕುಮಾರ ದಿಸ್ಸಾನಾಯಕೆ ಅವರು ಭಾನುವಾರ ಶ್ರೀಲಂಕಾದ ಒಂಬತ್ತನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ನಂತರ ದಿನೇಶ್ ಗುಣವರ್ಧನ ಅವರು ಶ್ರೀಲಂಕಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
* ಮಾನವ ಹಕ್ಕುಗಳ ಕಾರ್ಯಕರ್ತೆ ಮತ್ತು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾಗಿದ್ದ ಹರಿಣಿ ಅಮರಸೂರ್ಯ ಅವರು 2000ನೇ ವರ್ಷದಲ್ಲಿ ಸಿರಿಮಾವೋ ಬಂಡಾರನಾಯಕೆ ನಂತರ ಪ್ರಧಾನಿ ಹುದ್ದೆ ಅಲಂಕರಿಸಿದ್ದಾರೆ.
* ನ್ಯಾಯ, ಶಿಕ್ಷಣ, ಕಾರ್ಮಿಕ, ಕೈಗಾರಿಕೆಗಳು, ವಿಜ್ಞಾನ ಮತ್ತು ತಂತ್ರಜ್ಞಾನ, ಆರೋಗ್ಯ ಹಾಗೂ ಹೂಡಿಕೆ ಖಾತೆಗಳನ್ನು ಪಡೆದು ಕೊಂಡಿದ್ದಾರೆ.
ಬುಧವಾರ, 25 ಸೆಪ್ಟೆಂಬರ್ 2024
10:43 ಪೂರ್ವಾಹ್ನ
Daily PDF
ಶ್ರೀಲಂಕಾದ ನೂತನ ಪ್ರಧಾನಿಯಾಗಿ ಹರಿಣಿ ಅಮರ ಸೂರ್ಯ ಪ್ರಮಾಣ ವಚನ ಸ್ವೀಕಾರ
Authored by:
Yallamma G