* ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಮೂರನೇ ಉಡಾವಣಾ ಕೇಂದ್ರ ಸ್ಥಾಪನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
* ಸಚಿವ ಸಂಪುಟ ಸಭೆಯಲ್ಲಿ ಮೂರನೇ ಉಡಾವಣಾ ಕೇಂದ್ರ ಸ್ಥಾಪನೆಗೆ ಅನುಮೋದನೆ ನೀಡಿದ್ದು, ಇದು ಇಸ್ರೋದ ಎನ್‌ಜಿಎಲ್‌ವಿ ಮೂಲ ಸೌಕರ್ಯವನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದೆ.
* ಭಾರತ 2024ರ ವೇಳೆಗೆ ಮಾನವನನ್ನು ಚಂದ್ರನ ಬಳಿ ಕಳುಹಿಸುವ ಯೋಜನೆಗೆ ಮೂರನೇ ಉಡಾವಣಾ ಕೇಂದ್ರ ಸ್ಥಾಪನೆ ಮೂಲಕ ಸಿದ್ದತೆ ನಡೆಸುತ್ತಿದೆ.
*ಈ ಕೇಂದ್ರವನ್ನು 3,984.86 ಕೋಟಿ ರೂ. ವೆಚ್ಚದಲ್ಲಿ 4 ವರ್ಷಗಳಲ್ಲಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ, ಇದರಲ್ಲಿ ಉಡಾವಣಾ ಕೇಂದ್ರ, ವಾಹನ ಜೋಡಣೆ, ಉಪಗ್ರಹ ತಯಾರಿಕೆ, ಮತ್ತು ಇಂಧನ ಸೌಲಭ್ಯಗಳನ್ನು ಒಳಗೊಂಡಿರುತ್ತವೆ.
* ಬಾಹ್ಯಾಕಾಶ ಕೇಂದ್ರದಲ್ಲಿ ಎರಡು ಉಡಾವಣಾ ಕೇಂದ್ರಗಳಿದ್ದು, ಮೊದಲದು ಪಿಎಸ್‌ಎಲ್‌ವಿ ಮತ್ತು ಎಸ್‌ಎಸ್‌ಎಲ್‌ವಿ ರಾಕೆಟ್‌ಗಳಿಗಾಗಿ 30 ವರ್ಷಗಳ ಹಿಂದೆ ಸ್ಥಾಪಿತವಾಯಿತು.
* 20 ವರ್ಷಗಳ ನಂತರ GSLV ಮತ್ತು LVM3 ರಾಕೆಟ್‌ಗಳ ಉಡಾವಣೆಗೆ ಎರಡನೇ ಕೇಂದ್ರವನ್ನು ಸ್ಥಾಪಿಸಲಾಯಿತು.
* ಇದೀಗ ಹೊಸ ಉಡಾವಣಾ ಕೇಂದ್ರವು 2ನೇ ಉಡಾವಣಾ ಕೇಂದ್ರದ ಬ್ಯಾಕಪ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಭಾರವಾದ ರಾಕೆಟ್ ಉಡಾವಣೆಗಾಗಿ ಬಳಸಬಹುದಾಗಿದೆ.
ಶುಕ್ರವಾರ, 17 ಜನವರಿ 2025
10:57 ಪೂರ್ವಾಹ್ನ
Daily PDF
ಶ್ರೀಹರಿಕೋಟಾದಲ್ಲಿ ಮೂರನೇ ಉಡಾವಣಾ ಕೇಂದ್ರಕ್ಕೆ ಸಂಪುಟ ಒಪ್ಪಿಗೆ
Authored by:
Jyoti Angadi