- ಭಾರತದ ಅಧ್ಯಕ್ಷತೆ ಮತ್ತು ಜವಾಬ್ದಾರಿ: ಬ್ರಿಕ್ಸ್ ಒಕ್ಕೂಟವು ಪ್ರಸ್ತುತ ವಿಸ್ತರಣೆಯಾಗುತ್ತಿರುವ ಹಾಗೂ 2026ರಲ್ಲಿ ಭಾರತ ಇದರ ಅಧ್ಯಕ್ಷತೆ (Chairship) ವಹಿಸಿಕೊಳ್ಳುತ್ತಿರುವ ಪ್ರಮುಖ ಅವಧಿಯಲ್ಲಿ ಈ ನೇಮಕಾತಿ ನಡೆದಿದೆ.
- ಕಾರ್ಯ ವ್ಯಾಪ್ತಿ: ವಿವಿಧ ದೇಶಗಳ ನಡುವಿನ ವ್ಯಾಪಾರ ಕಾರಿಡಾರ್‌ಗಳು, ಹೂಡಿಕೆಗಳು ಮತ್ತು ಸಾಂಸ್ಥಿಕ ಮಾತುಕತೆಗಳನ್ನು ಬಲಪಡಿಸುವ ಜವಾಬ್ದಾರಿಯನ್ನು ಶರ್ಮಿಷ್ಠಾ ಹೊರಲಿದ್ದಾರೆ.
- ಅನುಭವ: ಇವರು ಸ್ಟ್ರಾಟಜಿಕ್ ಅಡ್ವೈಸರಿ ಮತ್ತು ಅಂತರರಾಷ್ಟ್ರೀಯ ವ್ಯಾಪಾರ ವಲಯದಲ್ಲಿ 20 ವರ್ಷಗಳಿಗೂ ಹೆಚ್ಚು ಸುದೀರ್ಘ ಅನುಭವ ಹೊಂದಿದ್ದಾರೆ.
- ಬ್ರಿಕ್ಸ್ (BRICS): ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಒಳಗೊಂಡ ಪ್ರಮುಖ ಜಾಗತಿಕ ಒಕ್ಕೂಟ. ಇತ್ತೀಚೆಗೆ ಇದು ಇರಾನ್, ಯುಎಇ, ಈಜಿಪ್ಟ್ ಮತ್ತು ಇಥಿಯೋಪಿಯಾ ದೇಶಗಳ ಸೇರ್ಪಡೆಯೊಂದಿಗೆ ವಿಸ್ತರಣೆಗೊಂಡಿದೆ.
- ಬ್ರಿಕ್ಸ್ ಬ್ಯಾಂಕ್: ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್ (NDB) ಇದರ ಪ್ರಧಾನ ಕಚೇರಿ ಚೀನಾದ ಶಾಂಘೈನಲ್ಲಿದೆ.
- ಬ್ರಿಕ್ಸ್ ಸಿಸಿಐ: ಬ್ರಿಕ್ಸ್ ರಾಷ್ಟ್ರಗಳ ನಡುವೆ ವಾಣಿಜ್ಯ, ವ್ಯಾಪಾರ ಮತ್ತು ಹೂಡಿಕೆಯನ್ನು ಉತ್ತೇಜಿಸುವ ಸಂಸ್ಥೆಯಾಗಿದೆ.