➤ ಮಧ್ಯಪ್ರದೇಶ ಸರ್ಕಾರವು ನೀಡುವ ಪ್ರತಿಷ್ಠಿತ ‘ರಾಷ್ಟ್ರೀಯ ಲತಾ ಮಂಗೇಷ್ಕರ್ ಸಮ್ಮಾನ್ 2026’ (National Lata Mangeshkar Award 2026) ಗೌರವಕ್ಕೆ ಪ್ರಸಿದ್ಧ ಸಂಗೀತ ನಿರ್ದೇಶಕ ಶಂತನು ಮೊಯಿತ್ರಾ (Shantanu Moitra) ಭಾಜನರಾಗಿದ್ದಾರೆ. ಸಂಗೀತ ನಿರ್ದೇಶನ ಕ್ಷೇತ್ರದಲ್ಲಿ ಅವರ ಅಪಾರ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಸೆಪ್ಟೆಂಬರ್ 28, 2026 ರಂದು ಇಂದೋರ್‌ನಲ್ಲಿ ನಡೆಯಲಿದೆ. 
ಪ್ರಶಸ್ತಿ ಪ್ರದಾನ ಸಮಾರಂಭದ ವೈಶಿಷ್ಟ್ಯಗಳು:
- ಸೆಪ್ಟೆಂಬರ್ 28ರ ಪ್ರಾಮುಖ್ಯತೆ: ಗಾನಕೋಗಿಲೆ ಲತಾ ಮಂಗೇಷ್ಕರ್ ಅವರ ಜನ್ಮದಿನದ ಅಂಗವಾಗಿ ಪ್ರತಿ ವರ್ಷ ಸೆಪ್ಟೆಂಬರ್ 28 ರಂದು ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.
- ಸ್ಥಳ: ಇಂದೋರ್‌ನ ಪರಸ್ಪರ ನಗರದಲ್ಲಿರುವ ‘ಲತಾ ಮಂಗೇಷ್ಕರ್ ರಂಗಮಂದಿರ’ದಲ್ಲಿ ಪ್ರಶಸ್ತಿ ವಿತರಣೆ ನಡೆಯಲಿದೆ.
- ಸಂಸ್ಕೃತಿ ಉತ್ಸವ: ಸೆಪ್ಟೆಂಬರ್ 27 ರಿಂದ ಆರಂಭವಾಗುವ ಎರಡು ದಿನಗಳ ಸಂಗೀತೋತ್ಸವದಲ್ಲಿ 'ಅಮರ್ ಲತಾ ಹಮಾರಿ ಲತಾ' ಹಾಗೂ ‘ಸಚೇತ್-ಪರಂಪರಾ’ ಜೋಡಿಯ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.
ಶಂತನು ಮೊಯಿತ್ರಾ ಬಗ್ಗೆ:
- ಜನನ: ಜನವರಿ 22, 1968 (ಲಖನೌ, ಉತ್ತರ ಪ್ರದೇಶ).
- ವೃತ್ತಿಜೀವನ: ಜಾಹೀರಾತು ರಂಗದಿಂದ ತಮ್ಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಭಾರತೀಯ ಚಿತ್ರರಂಗದ ಯಶಸ್ವಿ ಸಂಗೀತ ನಿರ್ದೇಶಕರಾಗಿ ಹೊರಹೊಮ್ಮಿದರು.
- ಪ್ರಸಿದ್ಧ ಸಿನಿಮಾಗಳು: ಪರಿಣೀತಾ (Parineeta), 3 ಇಡಿಯಟ್ಸ್ (3 Idiots), ಲಗೆ ರಹೋ ಮುನ್ನಾ ಭಾಯ್ (Lage Raho Munna Bhai), ಪಿಕು (Piku), 12th ಫೇಲ್ (12th Fail) ಸೇರಿದಂತೆ ಹಲವು ಪ್ರಸಿದ್ಧ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ.
- ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: 2014 ರಲ್ಲಿ 'ನಾ ಬಂಗಾರು ತಲ್ಲಿ' (ತೆಲುಗು) ಚಿತ್ರದ ಅತ್ಯುತ್ತಮ ಹಿನ್ನೆಲೆ ಸಂಗೀತಕ್ಕಾಗಿ (Background Score) ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದಾರೆ.
ಲತಾ ಮಂಗೇಷ್ಕರ್ ಪ್ರಶಸ್ತಿಯ ಹಿನ್ನೆಲೆ: 
- ಸ್ಥಾಪನೆ: ಮಧ್ಯಪ್ರದೇಶ ಸರ್ಕಾರವು ಈ ಪ್ರಶಸ್ತಿಯನ್ನು 1984 ರಲ್ಲಿ ಸ್ಥಾಪಿಸಿತು.
- ಕ್ಷೇತ್ರ: ಸಂಗೀತ ನಿರ್ದೇಶನ ಮತ್ತು ಹಿನ್ನೆಲೆ ಗಾಯನ (Playback Singing) ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಪರ್ಯಾಯವಾಗಿ (ಆಲ್ಟರ್ನೇಟಿವ್ ಆಗಿ) ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
- ಇಂದೋರ್ ಜೊತೆಗಿನ ನಂಟು: ಲತಾ ಮಂಗೇಷ್ಕರ್ ಅವರು ಸೆಪ್ಟೆಂಬರ್ 28, 1929 ರಂದು ಮಧ್ಯಪ್ರದೇಶದ ಇಂದೋರ್‌ನಲ್ಲಿ ಜನಿಸಿದರು.