➤ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ದೇಶದ ಬಾಹ್ಯಾಕಾಶ ರಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿದೆ. ಅಸ್ಸಾಂ ರಾಜ್ಯದ ಗುವಾಹಟಿ ಸಮೀಪದ ಚಂದ್ರಪುರದಲ್ಲಿ ಇಸ್ರೋದ ಅತ್ಯಾಧುನಿಕ ರಾಡಾರ್ ಸಂಶೋಧನಾ ಕೇಂದ್ರ (Advanced Radar Research Centre) ಸ್ಥಾಪನೆಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಸೋಮವಾರ (21-09-2026) ಶಂಕುಸ್ಥಾಪನೆ ನೆರವೇರಿಸಿದ್ದಾರೆ.
➤  'ಪ್ರಾಜೆಕ್ಟ್ ನೇತ್ರಾ' (Project NETRA): NETRA ಎಂದರೆ Network for Space Object Tracking and Analysis.   
ಉದ್ದೇಶ: ಬಾಹ್ಯಾಕಾಶದಲ್ಲಿರುವ ಕಕ್ಷೀಯ ವಸ್ತುಗಳು, ಉಪಗ್ರಹಗಳ ತ್ಯಾಜ್ಯ (Space Debris) ಮತ್ತು ರಕ್ಷಣಾ ಉಪಗ್ರಹಗಳನ್ನು ಪತ್ತೆಹಚ್ಚಿ, ಅವುಗಳಿಗೆ ಬಾಹ್ಯಾಕಾಶ ತ್ಯಾಜ್ಯದಿಂದ ಉಂಟಾಗಬಹುದಾದ ಡಿಕ್ಕಿ ಅಥವಾ ಅಪಾಯಗಳನ್ನು ತಪ್ಪಿಸುವುದು.   
ಪ್ರಾಮುಖ್ಯತೆ: ಇದು ಭಾರತದ ಬಾಹ್ಯಾಕಾಶ ಆಸ್ತಿಗಳನ್ನು ಸುರಕ್ಷಿತವಾಗಿಡಲು ಸ್ವತಂತ್ರ ವ್ಯವಸ್ಥೆಯನ್ನು ಒದಗಿಸುತ್ತದೆ.
➤ ಚಂದ್ರಪುರ ರಾಡಾರ್ ಕೇಂದ್ರದ ಮಹತ್ವ
- ಈಶಾನ್ಯ ಭಾರತದ ಮೊದಲ ದೊಡ್ಡ ಬಾಹ್ಯಾಕಾಶ ಯೋಜನೆ: ಈವರೆಗೆ ತಂತ್ರಜ್ಞಾನ ಹಾಗೂ ವಿಜ್ಞಾನ ಕೇಂದ್ರಗಳಿಂದ ದೂರವಿದ್ದ ಅಸ್ಸಾಂ ರಾಜ್ಯವು ಈಗ ರಾಷ್ಟ್ರೀಯ ಮಟ್ಟದ ಮಹತ್ವದ ಬಾಹ್ಯಾಕಾಶ ಯೋಜನೆಯ ಕೇಂದ್ರವಾಗಿ ಬೆಳೆಯುತ್ತಿದೆ.   
- ಭೌಗೋಳಿಕ ಪ್ರಾಮುಖ್ಯತೆ: ದಕ್ಷಿಣ ಮತ್ತು ಉತ್ತರ ಭಾರತದಲ್ಲಿರುವ ಇಸ್ರೋ ಕೇಂದ್ರಗಳ ಜೊತೆಗೆ ಈಶಾನ್ಯ ಭಾರತದಲ್ಲಿ ಈ ರಾಡಾರ್ ಸ್ಥಾಪನೆಯಾಗುವುದರಿಂದ ದೇಶದ ಸಮಗ್ರ ಬಾಹ್ಯಾಕಾಶ ಕಣ್ಣಾವಲು ಜಾಲ ಪೂರ್ಣಗೊಳ್ಳಲಿದೆ.
- ಸರ್ಕಾರದ ಬೆಂಬಲ: ಈ ಯೋಜನೆಗಾಗಿ ಅಸ್ಸಾಂ ಸರ್ಕಾರವು ಸುಮಾರು 67 ಎಕರೆ (200 ಬಿಘಾ) ಭೂಮಿಯನ್ನು ಹಂಚಿಕೆ ಮಾಡಿದೆ.  
➤ ಧುಬ್ರಿಯಲ್ಲಿ ₹48,000 ಕೋಟಿ ವೆಚ್ಚದ ವಿದ್ಯುತ್ ಯೋಜನೆ: ಇಸ್ರೋ ರಾಡಾರ್ ಕೇಂದ್ರದ ಶಂಕುಸ್ಥಾಪನೆ ಜೊತೆಗೆ, ಅಸ್ಸಾಂನ ಧುಬ್ರಿ ಜಿಲ್ಲೆಯ ಚಾಪರ್‌ನಲ್ಲಿ ಆದಾನಿ ಪವರ್ ಲಿಮಿಟೆಡ್ (Adani Power Ltd) ವತಿಯಿಂದ 3,200 ಮೆಗಾವ್ಯಾಟ್ (MW) ಸಾಮರ್ಥ್ಯದ 'ಅತಿ-ಸೂಪರ್ ಕ್ರಿಟಿಕಲ್ ಉಷ್ಣ ವಿದ್ಯುತ್ ಯೋಜನೆ'ಗೆ (Ultra-Supercritical Thermal Power Project) ಶಂಕುಸ್ಥಾಪನೆ ನೆರವೇರಿಸಲಾಗಿದೆ.  - ಹೂಡಿಕೆ ಮೊತ್ತ: ಅಂದಾಜು ₹48,000 ಕೋಟಿ (ಅಸ್ಸಾಂ ಕೈಗಾರಿಕಾ ವಲಯದಲ್ಲಿ ಅತಿ ದೊಡ್ಡ ಹೂಡಿಕೆಗಳಲ್ಲಿ ಒಂದು).