* ತ್ರಿಪುರ ಪ್ರವಾಸೋದ್ಯಮದ ಸಚಿವರಾದ ಸುಶಾಂತ ಚೌಧರಿ ರವರು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಮಾಜಿ ಬಿಸಿಸಿಐ ಮುಖ್ಯಸ್ಥರಾದ ಸೌರವ್ ಗಂಗೂಲಿ ಅವರನ್ನು ತ್ರಿಪುರ ಪ್ರವಾಸೋದ್ಯಮದ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಲಾಗಿದೆ.
* ರಾಜ್ಯದ ಪ್ರವಾಸೋದ್ಯಮ ಸಚಿವ ಸುಶಾಂತ ಚೌಧರಿ ಅವರನ್ನು ಕೋಲ್ಕತ್ತಾದ ಅವರ ನಿವಾಸದಲ್ಲಿ ಭೇಟಿಯಾದ ನಂತರ ಗಂಗೂಲಿ ಅವರು ತ್ರಿಪುರಾ ಪ್ರವಾಸೋದ್ಯಮದ ಬ್ರಾಂಡ್ ಅಂಬಾಸಿಡರ್ ಆಗಲು ಇಚ್ಛೆಯನ್ನು ವ್ಯಕ್ತಪಡಿಸಿದರು.
* ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗರೊಂದಿಗೆ ಮಾತನಾಡಿದ್ದ ತ್ರಿಪುರ ಮುಖ್ಯಮಂತ್ರಿಗಳಾದ ಮಾಣಿಕ್ ಸಹಾ ರವರು ಗಂಗೂಲಿ ಅವರ ಪ್ರವಾಸೋದ್ಯಮದಲ್ಲಿ ಪಾಲ್ಗೊಳ್ಳುವಿಕೆಯಿಂದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.