* ಸ್ಥಳೀಯ ವಿಚಾರಗಳ ಬಗ್ಗೆ ಸಮಾಲೋಚನ ನಡೆಸಲು ಸಾರ್ಕ್ ಶೃಂಗಸಭೆ ಆಯೋಜಿಸಲು ಕ್ರಮ ಕೈಗೊಳ್ಳಿ ಪಾಕಿಸ್ತಾನದ ಸದ್ಯದ ಸಂಕಷ್ಟ ನಿವಾರಿಸಲು ಸಾರ್ಕ್ ಶೃಂಗದಂತಹ ಸಭೆ ನಡೆಸಿದರೆ ಭಾರತ ವಿಶ್ವಗುರುವಾಗಲು ಸಹಾಯವಾಗಲಿದೆ, ಎಂದು ಮುಫ್ತಿ ಅಭಿಪ್ರಾಯಪಟ್ಟಿದ್ದಾರೆ.
* ದಕ್ಷಿಣ ಏಷ್ಯಾದ ಎಂಟು ರಾಷ್ಟ್ರಗಳು ಸೇರಿ ಸಾರ್ಕ್ ರಚಿಸಿಕೊಂಡಿರುವ ಒಂದು ಅಂತಾರಾಷ್ಟ್ರೀಯ ಪ್ರಾದೇಶಿಕ ಸಂಘಟನೆ. 1985ರಲ್ಲಿ ಇದನ್ನು ಸ್ಥಾಪಿಸಲಾಯಿತು. ನೇಪಾಳದ ಕಠ್ಮಂಡುವಿನಲ್ಲಿ ಇದರ ಪ್ರಧಾನ ಕಚೇರಿಯಿದೆ.
* ಸದಸ್ಯ ರಾಷ್ಟ್ರಗಳು: ಬಾಂಗ್ಲಾದೇಶ, ಭಾರತ, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ, ಭೂತಾನ್ ಸಾರ್ಕ್‌ನ ಸದಸ್ಯ ರಾಷ್ಟ್ರಗಳಾಗಿವೆ.
* 2009ರವರೆಗೆ ಚೀನಾ, ಜಪಾನ್, ಕೊರಿಯಾ, ಅಮೆರಿಕ, ಇರಾನ್, ಮಾರಿಷಸ್, ಆಸ್ಟ್ರೇಲಿಯಾ, ಮ್ಯಾನ್ಮಾರ್ - ಹಾಗೂ ಯೂರೋಪಿನ್ ಒಕ್ಕೂಟ ರಾಷ್ಟ್ರಗಳು ಸಾರ್ಕ್ ವೀಕ್ಷಕರಾಗಿದ್ದವು.
ಸಾರ್ಕ್ ಶೃಂಗಸಭೆ
Published by Akshata Halli
16 ಮೇ 2023