* ರಿಷಭ್ ಪಂತ್ ಅವರನ್ನು 2025 ರ ಲಾರೆಸ್ ವಿಶ್ವ ಕ್ರೀಡಾ ಪ್ರಶಸ್ತಿಗೆ ವರ್ಷದ ಕಮ್‌ಬ್ಯಾಕ್ ವಿಭಾಗದಲ್ಲಿ ನಾಮನಿರ್ದೇಶನ ಮಾಡಲಾಗಿದೆ. ಈ ವಿಭಾಗದಲ್ಲಿ ಒಟ್ಟು 6 ಆಟಗಾರರನ್ನು ನಾಮನಿರ್ದೇಶನ ಮಾಡಲಾಗಿದ್ದು, ಇದರಲ್ಲಿ ಪಂತ್ ಕೂಡ ಒಬ್ಬರಾಗಿದ್ದಾರೆ.
* 2011ರ ಐಸಿಸಿ ಏಕದಿನ ವಿಶ್ವಕಪ್ ಗೆಲುವಿನ ರೂವಾರಿ ಎನಿಸಿಕೊಂಡಿದ್ದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್‌ಗೆ 2020ನೇ ಸಾಲಿನ ಲಾರೆಸ್ ಪ್ರಶಸ್ತಿ ಜಯಿಸಿದ್ದರು. ಇದೀಗ ಸಚಿನ್ ತೆಂಡುಲ್ಕರ್ ಬಳಿಕ ಲಾರೆಸ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಭಾರತದ ಎರಡನೇ ಕ್ರಿಕೆಟಿಗ ಎನ್ನುವ ಹಿರಿಮೆಗೆ ಪಂತ್ ಅವರು ಪಾತ್ರರಾಗಿದ್ದಾರೆ.
* ಪಂತ್ ಈ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಭಾರತದ ನಾಲ್ಕನೇ ಕ್ರೀಡಾಪಟು ಎನಿಸಿಕೊಂಡಿದ್ದಾರೆ. ಪಂತ್ಗೂ ಮೊದಲು ಸಚಿನ್ ತೆಂಡೂಲ್ಕರ್, ನೀರಜ್ ಚೋಪ್ರಾ ಮತ್ತು ವಿನೇಶ್ ಫೋಗಟ್ ಕೂಡ ಈ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.
* ಪ್ರಶಸ್ತಿಗೆ ನಾಮನಿರ್ದೇಶಿತರು
- ರೆಬೆಕ್ಕಾ ಆಂಡ್ರೇಡ್ (ಬ್ರೆಜಿಲ್) ಜಿಮ್ನಾಸ್ಟಿಕ್ಸ್
- ಕೇಲೆಬ್ ಡ್ರೆಸ್ಸೆಲ್ (ಯುಎಸ್ಎ) ಈಜು
- ಲಾರಾ ಗಟ್-ಟೆರುಲ್ (ಸ್ವಿಟ್ಜರ್ಲೆಂಡ್) ಆಲ್ಪೈನ್ ಸ್ಕೀಯಿಂಗ್
- ಮಾರ್ಕ್ ಮಾರ್ಕ್ವೆಜ್ (ಸ್ಪೇನ್) ಮೋಟಾರ್‌ಸೈಕ್ಲಿಂಗ್
- ರಿಷಭ್ ಪಂತ್ (ಭಾರತ) ಕ್ರಿಕೆಟ್
- ಅರಿಯೇನ್ ಟಿಟ್ಮಸ್ (ಆಸ್ಟ್ರೇಲಿಯಾ) ಈಜು
* ಲಾರೆಸ್ ವಿಶ್ವ ಕ್ರೀಡಾ ಪ್ರಶಸ್ತಿಗಳು 2024 ರ ವಿಜೇತರನ್ನು ಏಪ್ರಿಲ್ 21, 2025 ರಂದು ಘೋಷಿಸಲಾಗುವುದು.
ಬುಧವಾರ, 05 ಮಾರ್ಚ್ 2025
11:17 ಪೂರ್ವಾಹ್ನ
Daily PDF
ರಿಷಭ್ ಪಂತ್ - 2025 ರ ಲಾರೆಸ್ ವಿಶ್ವ ಕ್ರೀಡಾ ಪ್ರಶಸ್ತಿಗೆ ನಾಮನಿರ್ದೇಶನ
Authored by:
Jyoti Angadi