* ಭಾರತದ ಪ್ರಮುಖ ಸಂಘಟಿತ ಕಂಪನಿಗಳಲ್ಲಿ ಒಂದಾದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (Reliance Industries Limited) ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಎಂ. ಅಂಬಾನಿ ಅವರನ್ನು ಕಂಪನಿಯ ಪೂರ್ಣಾವಧಿ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.
* ಕಂಪನಿಯ ನಿರ್ದೇಶಕರ ಮಂಡಳಿ ಶುಕ್ರವಾರ ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದು, ಮೇ 1 ರಿಂದ ಅನಂತ್ ಅಂಬಾನಿ ಅವರು ಕಾರ್ಯನಿರ್ವಾಹಕ ನಿರ್ದೇಶಕರಾಗಿ ತಮ್ಮ ಹೊಸ ಜವಾಬ್ದಾರಿ ವಹಿಸಲಿದ್ದಾರೆ.
* ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಶುಕ್ರವಾರ ಪ್ರಕಟಣೆ ಹೊರಡಿಸಿ, ಅನಂತ್ ಎಂ. ಅಂಬಾನಿ ಅವರನ್ನು ಕಂಪನಿಯ ಪೂರ್ಣಕಾಲಿಕ ನಿರ್ದೇಶಕರಾಗಿ ನೇಮಿಸಿರುವುದಾಗಿ ತಿಳಿಸಿದೆ.
* ನಿರ್ದೇಶಕರ ಮಂಡಳಿಯ ಅನುಮೋದನೆಯೊಂದಿಗೆ, ಅನಂತ್ ಮುಖೇಶ್ ಅಂಬಾನಿ ಅವರನ್ನು ಮೇ 1, 2025ರಿಂದ ಮುಂದಿನ ಐದು ವರ್ಷಗಳ ಕಾಲ ರಿಲಯನ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.
ರಿಲಯನ್ಸ್ ಕಂಪನಿಯಲ್ಲಿ ಪೂರ್ಣಾವಧಿ ನಿರ್ದೇಶಕರಾಗಿ ಅನಂತ್ ಅಂಬಾನಿ ನೇಮಕ
Published by Jyoti Angadi
26 ಏಪ್ರಿಲ್ 2025