* ಕರ್ನಾಟಕದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಎಯರ್‌ಪೋರ್ಟ್ ಕೌನ್ಸಿಲ್ ಇಂಟರ್‌ನ್ಯಾಷನಲ್ (ACI) ಏಷ್ಯಾ-ಪೆಸಿಫಿಕ್ ಮತ್ತು ಮಧ್ಯ ಪೂರ್ವದ "ಗ್ರೀನ್ ಏರ್ಪೋರ್ಟ್ಸ್ ರೆಕಗ್ನಿಷನ್ 2025"(Green Airports Recognition) ಪ್ರಶಸ್ತಿಯಲ್ಲಿ ಅತಿಹೆಚ್ಚು ಗೌರವವಾದ ಪ್ಲಾಟಿನಂ ಮಾನ್ಯತೆ ಲಭಿಸಿದೆ.
* ಪ್ರತಿವರ್ಷ ಆರು ಮಿಲಿಯನ್ ಕ್ಕಿಂತ ಕಡಿಮೆ ಪ್ರಯಾಣಿಕರು ಸಂಚರಿಸುವ ವಿಮಾನ ನಿಲ್ದಾಣಗಳ ನಡುವೆ "ಸುಸ್ಥಿರ ಇಂಧನ ಉಪಯೋಗ" ಶ್ರೇಣಿಯಲ್ಲಿ ಈ ಗೌರವ ಲಭಿಸಿದೆ.
* ಏಪ್ರಿಲ್ 16 ರಂದು ನವದೆಹಲಿಯಲ್ಲಿ ನಡೆದ ACI ಪ್ರಾದೇಶಿಕ ಸಭೆಯಲ್ಲಿ AAI ತಾಂತ್ರಿಕ ನಿರ್ದೇಶಕ ರಾಜೇಶ್ ನಿಲಕಂಠ ಶಿಂಧೆ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದರು.
* ಈ ಗೌರವವು ಡಿಸೆಂಬರ್ 2022ರಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸ್ಥಾಪಿಸಲಾದ 8 ಮೆಗಾವಾಟ್ ಸೌರ ವಿದ್ಯುತ್ ಘಟಕದ ಸಾಧನೆಗೆ ನೀಡಲಾಗಿದೆ.
* ಇದು ಭಾರತದಲ್ಲಿ ಮೊದಲ ಘಟಕವಾಗಿದ್ದು, ಹುಬ್ಬಳ್ಳಿ, ಬೆಳಗಾವಿ ಮತ್ತು ಮೈಸೂರು ವಿಮಾನ ನಿಲ್ದಾಣಗಳಿಗೆ ಶುದ್ಧ ವಿದ್ಯುತ್ ಪೂರೈಕೆ ಮಾಡುತ್ತದೆ. ಮುಂದಿನ ದಿನಗಳಲ್ಲಿ ಇತರ ಟರ್ಮಿನಲ್‌ಗಳಿಗೂ ವಿಸ್ತರಣೆ ಯೋಜನೆ ಇದೆ.
* ಈ ಘಟಕವು ವರ್ಷಕ್ಕೆ 11 ಮಿಲಿಯನ್ ಯೂನಿಟ್‌ಗಳಷ್ಟು ಶುದ್ಧ ವಿದ್ಯುತ್ ಉತ್ಪಾದಿಸಬಹುದಾಗಿದ್ದು, ಸಂಪೂರ್ಣ ಅವಧಿಯಲ್ಲಿ 2.15 ಲಕ್ಷ ಟನ್ ಕಾರ್ಬನ್ ಉತ್ಸರ್ಜನೆಯನ್ನು ಕಡಿಮೆ ಮಾಡುವ ನಿರೀಕ್ಷೆ ಇದೆ.
* ಈ ಯೋಜನೆ AAIಯ ಹಸಿರು ಮತ್ತು ಇಂಧನದಕ್ಷ ವಿಮಾನ ನಿಲ್ದಾಣಗಳ ಕನಸಿಗೆ ಮಹತ್ವದ ಹೆಜ್ಜೆಯಾಗಿದ್ದು, ಶೂನ್ಯ ಕಾರ್ಬನ್ ಉತ್ಸರ್ಜನೆ ಸಾಧಿಸುವ ಭಾರತದ ದೃಢ ನಿಟ್ಟಿಗೆ ಸ್ಪಷ್ಟ ಚಿಹ್ನೆಯಾಗಿದೆ.
ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ACI ಯಿಂದ ಪ್ಲಾಟಿನಂ ಗ್ರೀನ್ ಏರ್ಪೋರ್ಟ್ ಗೌರವ
Published by Jyoti Angadi
26 ಏಪ್ರಿಲ್ 2025