* ರೇಲ್ವೆ ದುರಂತಗಳನ್ನು ತೆಡೆಗಟ್ಟುವ ಸಲುವಾಗಿ ಕೈಗೊಂಡಿದ್ದ ಸ್ವಯಂಚಾಲಿತ ರೈಲು ಸಂರಕ್ಷಣಾ ವ್ಯವಸ್ಥೆ ಕವಚದ ಪರೀಕ್ಷೆ ಯಶಸ್ವಿಯಾಗಿದೆ. ಎಂದು ಉತ್ತರ ಕೇಂದ್ರ ರೈಲ್ವೆಯ ಆಗ್ರಾ ವಿಭಾಗವು ತಿಳಿಸಿದೆ.
* ಸೆಮಿ ಹೈಸ್ಪೀಡ್ / 160 ಕಿ.ಮೀ ವೇಗದಲ್ಲಿ ಸಂಚರಿಸುತ್ತಿದ್ದ ರೈಲು, ರೆಡ್ ಸಿಗ್ನಲ್ ಕಂಡ ಕೂಡಲೇ ಸ್ವಯಂಚಾಲಿತವಾಗಿ ಬ್ರೇಕ್ ಹಾಕಿ, ನಿಲ್ಲುವ ಮೂಲಕ ಪರೀಕ್ಷೆ ಯಶಸ್ವಿ ಯಾಗಿದೆ, ಈ ವ್ಯವಸ್ಥೆಯನ್ನು ರಿಸರ್ಚ್ ಡಿಸೈನ್ & ಸ್ಟ್ಯಾಂಡರ್ಡ್ ಆರ್ಗನೈಸೇಷನ್ (ಆರ್‌ಡಿಎಸ್‌ಒ) ಅಭಿವೃದ್ಧಿಪಡಿಸಿದೆ. ಸಂದರ್ಭಗಳಲ್ಲಿ ಲೋಕೋ ಪೈಲಟ್. ಬ್ರೇಕ್ ಹಾಕಲು ವಿಫಲವಾದಾಗ ಕವಚ ವ್ಯವಸ್ಥೆಯು ತಾನಾಗಿಯೇ ಬ್ರೇಕ್ ಹಾಕಿ ರೈಲನ್ನು ನಿಲ್ಲಿಸುತ್ತದೆ.
* ಸುರಕ್ಷತೆ ದೃಷ್ಟಿಯಿಂದ - ದೇಶದ ರೈಲ್ವೆ ಜಾಲದಲ್ಲಿ ಕವಚ ವ್ಯವಸ್ಥೆ ಅಳವಡಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಶತಾಬಿ ಮತ್ತು ಗತಿಮಾನ್ ಎಕ್ಸ್‌ಪ್ರೆಸ್ ನಂತಹ ರೈಲುಗಳಲ್ಲಿಯೂ ಈ ವ್ಯವಸ್ಥೆಯನ್ನು ಪರೀಕ್ಷಿಸಲಾಗುತ್ತದೆ.
* ಕವಚ್ ಆಡಿಯೊ-ವಿಡಿಯೋ ಮೂಲಕ ಮೊದಲು ಎಚ್ಚರಿಸುತ್ತದೆ. ಅದಕ್ಕೆ ಯಾವುದೇ ಪ್ರತಿಕ್ರಿಯೆ ಇಲ್ಲದಿದ್ದರೆ, ರೈಲಿನಲ್ಲಿ ಸ್ವಯಂಚಾಲಿತ ಬ್ರೇಕ್‌ಗಳನ್ನು ಅನ್ವಯಿಸಲಾಗುತ್ತದೆ. ಇದರೊಂದಿಗೆ, ಈ ವ್ಯವಸ್ಥೆಯು ರೈಲು ನಿಗದಿತ ವಿಭಾಗದ ವೇಗಕ್ಕಿಂತ ವೇಗವಾಗಿ ಓಡಲು ಅನುಮತಿಸುವುದಿಲ್ಲ.
* ರಕ್ಷಾಕವಚದಲ್ಲಿರುವ RFID ಸಾಧನಗಳನ್ನು ರೈಲು ಎಂಜಿನ್, ಸಿಗ್ನಲ್ ವ್ಯವಸ್ಥೆ, ರೈಲು ನಿಲ್ದಾಣದ (Railway Station) ಒಳಗೆ ಅಳವಡಿಸಲಾಗುವುದು. ಜಿಪಿಎಸ್ (GPS), ರೇಡಿಯೋ ಫ್ರೀಕ್ವೆನ್ಸಿಯಂತಹ ವ್ಯವಸ್ಥೆಗಳಲ್ಲಿ ಕವಚ್ ತಂತ್ರಜ್ಞಾನ ಕಾರ್ಯ ನಿರ್ವಹಿಸಲಿದೆ.
* ಪ್ರಯೋಗಗಳ ಆಧಾರದ ಮೇಲೆ, 160 kmph ವೇಗಕ್ಕೆ 'ಕವಚ' ಅನ್ನು ಅನುಮೋದಿಸಲಾಗಿದೆ. ಇಲ್ಲಿಯವರೆಗೆ, ದಕ್ಷಿಣ ಮಧ್ಯ ರೈಲ್ವೆಯ (South Central Railway) ನಡೆಯುತ್ತಿರುವ ಯೋಜನೆಗಳಲ್ಲಿ 1098 ಕಿಲೋಮೀಟರ್ ರೂಟ್ ಮತ್ತು 65 ಲೋಕೋಗಳಲ್ಲಿ ಕವಚವನ್ನು ನಿಯೋಜಿಸಲಾಗಿದೆ.
ರೇಲ್ವೆ ಸುರಕ್ಷತೆ ಕವಚ ಪರೀಕ್ಷೆ ಯಶಸ್ವಿ
Published by Yallamma G
27 ಜನವರಿ 2024