* ಗವರ್ನರ್ ಶಕ್ತಿಕಾಂತ ದಾಸ್ ಅಧ್ಯಕ್ಷತೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್​ ಇಂಡಿಯಾದ ಹಣಕಾಸು ನೀತಿ ಸಮಿತಿ ಸಭೆ (ಎಂಪಿಸಿ) ಅಕ್ಟೋಬರ್ 7 ರಿಂದ ಆರಂಭವಾಗಿದ್ದು ಈ ಬಾರಿಯೂ ರೆಪೊದರದಲ್ಲಿ ಉಪಸ್ಥಿತಿ ಕಾಯ್ದುಕೊಳ್ಳುವ ಸಾಧ್ಯತೆಗಳಿವೆ ಎಂದು ಹಣಕಾಸು ತಜ್ಞರು ತಿಳಿಸಿದ್ದಾರೆ.
* ಈ ಹಣಕಾಸು ನೀತಿ ಸಮಿತಿ ಸಭೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಪ್ರತೀ ಎರಡು ತಿಂಗಳಿಗೊಮ್ಮೆ ನಡೆಸುವ ಸಭೆಯಾಗಿದೆ. ಮೂರು ದಿನ ನಡೆಯುವ ಈ ಸಭೆಯಲ್ಲಿ ಮೊದಲ ಎರಡು ದಿನ ಪ್ರಮುಖ ಸಂಗತಿಗಳ ಚರ್ಚೆಯಾಗುತ್ತದೆ. ಅಕ್ಟೋಬರ್ 9ರಂದು  ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಲಿದ್ದು ಸಭೆಯ ನಿರ್ಧಾರಗಳನ್ನು ಪ್ರಕಟಗೊಳಿಸಲಿದ್ದಾರೆ.
* ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರವಾಗಿದ್ದು. ಇದು ಕಚ್ಚಾತೈಲ ಮತ್ತು ಸರಕುಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗಲಿದೆ.
* ಪ್ರಸ್ತುತ ಬಡ್ಡಿದರ ಶೇ. 6.5ರಷ್ಟಿದೆ. ಕಳೆದ ಒಂದೂವರೆ ವರ್ಷದಿಂದ ಈ ದರದಲ್ಲಿ ಬದಲಾವಣೆ ಆಗಿಲ್ಲ. ಹಿಂದಿನ ಒಂಬತ್ತು ಸಭೆಗಳಲ್ಲಿ ಯಥಾಸ್ಥಿತಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಡಿಸೆಂಬರ್​ನಲ್ಲಿ ನಡೆಯುವ ಸಭೆಯಲ್ಲಿ ಬಡ್ಡಿದರ ಕಡಿಮೆ ಮಾಡಬಹುದು ಎಂದು ಹೇಳಲಾಗುತ್ತಿದೆ.
* ಇತ್ತೀಚಿಗೆ ಹಣಕಾಸು ನೀತಿ ಸಮಿತಿಯನ್ನು ಪುನರ್ ರಚಿಸಲಾಗಿದೆ. ಆರ್​ಬಿಐನ ಹಣಕಾಸು ನೀತಿ ಸಮಿತಿಯಲ್ಲಿ ಒಟ್ಟು ಆರು ಸದಸ್ಯರಿರುತ್ತಾರೆ. ಮೂವರು ಸದಸ್ಯರು ಆರ್​ಬಿಐನ ಒಳಗಿನವರೇ ಆಗಿರುತ್ತಾರೆ. ಇತರ ಮೂವರು ಸದಸ್ಯರು ಹೊರಗಿನವರಾಗಿರುತ್ತಾರೆ.
* ಆರ್​ಬಿಐ ಗವರ್ನರ್ ಶಕ್ತಿಕಾಂತದಾಸ್, ಡೆಪ್ಯುಟಿ ಗವರ್ನರ್ ಮೈಕೇಲ್ ದೇವವ್ರತಾ ಪಾತ್ರ ಮತ್ತು ಎಕ್ಸಿಕ್ಯೂಟಿವ್ ಡೈರೆಕ್ಟರ್ ರಾಜೀವ್ ರಂಜನ್ ಅವರು ಆರ್​ಬಿಐ ಅನ್ನು ಪ್ರತಿನಿಧಿಸುವ ಸದಸ್ಯರಾಗಿದ್ದಾರೆ. ಸೌಗತ ಭಟ್ಟಾಚಾರ್ಯ, ಡಾ. ನಾಗೇಶ್ ಕುಮಾರ್ ಮತ್ತು ಪ್ರೊಫೆಸರ್ ರಾಮ್ ಸಿಂಗ್ ಅವರು ಹೊಸದಾಗಿ ಎಂಪಿಸಿಗೆ ನೇಮಕವಾದ ಬಾಹ್ಯ ಸದಸ್ಯರಾಗಿದ್ದಾರೆ.