* ಗುಜರಾತ್‌ನ 14ನೇ ಮುಖ್ಯಮಂತ್ರಿಯಾದ ಪ್ರಧಾನಿ ನರೇಂದ್ರ ಮೋದಿಯವರು 2001ರ ಅಕ್ಟೋಬರ್ 7ರಂದು ಪ್ರಮಾಣವಚನ ಸ್ವೀಕರಿಸಿದ್ದರ ಸ್ಮರಣಾರ್ಥವಾಗಿ ಪ್ರತಿವರ್ಷ ಅಕ್ಟೋಬರ್ 7ರಂದು 'ವಿಕಾಸ ಸಪ್ತಾಹ' ಆಯೋಜಿಸಲು ಗುಜರಾತ್ ರಾಜ್ಯ ಸರಕಾರ ನಿರ್ಧರಿಸಿದೆ.
* ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಕ್ಟೋಬರ್ 7ರಿಂದ 15ರವರೆಗೆ ವಿಕಾಸ ಸಪ್ತಾಹ ಆಯೋಜಿಸುವ ಸಂಬಂಧ ಚರ್ಚಿಸಲಾಗಿದೆ ಎಂದು ಸಚಿವ ಋಷಿಕೇಶ್ ಪಟೇಲ್ ಅವರು ಮಾಹಿತಿ ನೀಡಿದ್ದಾರೆ.
* ನರೇಂದ್ರ ಮೋದಿಯವರ ಮುಖ್ಯಮಂತ್ರಿಯಾಗಿ ರಾಜ್ಯದ ಅಭಿವೃದ್ಧಿಯನ್ನು ಗುರುತಿಸಲು ಗುಜರಾತ್‌ನ ಬಿಜೆಪಿ ಸರ್ಕಾರ 'ವಿಕಾಸ ಸಪ್ತಾಹ'ವನ್ನು ಪ್ರಾರಂಭಿಸಿದೆ.
* ಪ್ರಧಾನಿ ಮೋದಿ 2001 ರಿಂದ 2014 ರವರೆಗೆ ಗುಜರಾತ್ ಮುಖ್ಯಮಂತ್ತ್ರಿಯಾಗಿ ಸೇವೆ ಸಲ್ಲಿಸಿದರು ಮತ್ತು ನಂತರ ಪ್ರಧಾನಿಯಾದರು.
* 2005ರ ಏಪ್ರಿಲ್ 1ಕ್ಕೂ ಮುನ್ನ ಸ್ಥಿರ ವೇತನದ ಆಧಾರದಲ್ಲಿ ನೇಮಕಗೊಂಡಿರುವ ಸುಮಾರು 60.000ಕ್ಕೂ ಅಧಿಕ ನೌಕರರಿಗೆ ಹಳೇ ಪಿಂಚಣಿ ವ್ಯವಸ್ಥೆ (ಒಪಿಎಸ್) ಹಾಗೂ ಇತರ ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆ ಸಂಪುಟ ಸಭೆ ನಿರ್ಧರಿಸಿದೆ ಎಂದಿದ್ದಾರೆ.
ಮೋದಿ ಸಿಎಂ ಅವಧಿಯಲ್ಲಿ ಅಭಿವೃದ್ಧಿಯನ್ನು ಗುರುತಿಸಲು ಗುಜರಾತ್ ಸರ್ಕಾರ 'ವಿಕಾಸ್ ಸಪ್ತಾಹ' ಪ್ರಾರಂಭ
Published by Bhagya R K
08 ಅಕ್ಟೋಬರ್ 2024