➤ 2026 ರ ಸೆಪ್ಟೆಂಬರ್ 25 ರಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನವದೆಹಲಿಯಲ್ಲಿ ‘ಫಸ್ಟ್ ಅಸೆಂಟ್ ಪರ್ವತಾರೋಹಣ ಸಾಹಸ ಅಭಿಯಾನ’ (First Ascent Mountaineering Expedition) ತಂಡಕ್ಕೆ ಅಧಿಕೃತ ಸ್ವಾಗತ (Flag-in) ಕೋರಿದರು. ಈ ಅಭಿಯಾನವು ಲಡಾಖ್ ಪ್ರದೇಶದಲ್ಲಿ ಈವರೆಗೆ ಯಾರೂ ಹತ್ತದಿದ್ದ 6,000 ಮೀಟರ್‌ಗಿಂತಲೂ ಹೆಚ್ಚಿನ ಎತ್ತರದ 20 ಪ್ರಮುಖ ಪರ್ವತ ಶಿಖರಗಳನ್ನು ಕೇವಲ 23 ದಿನಗಳಲ್ಲಿ ಯಶಸ್ವಿಯಾಗಿ ಏರುವ ಮೂಲಕ ವಿಶ್ವದಾಖಲೆ ಬರೆದಿದೆ.
- ತಂಡದ ನೇತೃತ್ವ: ಕರ್ನಲ್ ರಣವೀರ್ ಸಿಂಗ್ ಜಮ್ವಾಲ್ (Director, NIMAS)
- ಸಂಸ್ಥೆ: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನೇರಿಂಗ್ ಅಂಡ್ ಅಡ್ವೆಂಚರ್ ಸ್ಪೋರ್ಟ್ಸ್ (NIMAS)
➤ ಲಡಾಖ್‌ನ ಭೌಗೋಳಿಕ ಪ್ರದೇಶ ಮತ್ತು ಸ್ಥಳಗಳು: ಈ ಅಭಿಯಾನವನ್ನು ಲಡಾಖ್ ಸಾಲಿನ ಪ್ರಮುಖ ಪರ್ವತ ಶ್ರೇಣಿಗಳಲ್ಲಿ ನಡೆಸಲಾಯಿತು:
1. ಚಮ್ಸರ್-ಲಂಗ್ಸರ್ (Chamser-Lungser)
2. ಗ್ಯಾಮಾ ನಾಲಾ (Gyama Nala)
3. ಚೊಕುಲಾ (Chokula)
ಈ ಪ್ರದೇಶಗಳು ಅತ್ಯಂತ ಹಿಮಾವೃತವಾಗಿದ್ದು, 6,000 ಮೀಟರ್ ಎತ್ತರದ ಕಠಿಣ ಭೌಗೋಳಿಕ ವಾತಾವರಣವನ್ನು ಹೊಂದಿವೆ.
➤ ತಂಡದ ವಿವರ: ಈ ಐತಿಹಾಸಿಕ ಅಭಿಯಾನವನ್ನು ಅರುಣಾಚಲ ಪ್ರದೇಶದ 'NIMAS' ಸಂಸ್ಥೆಯ ಕರ್ನಲ್ ರಣವೀರ್ ಸಿಂಗ್ ಜಮ್ವಾಲ್ ಅವರ ನೇತೃತ್ವದ 20 ಸದಸ್ಯರ ಪರ್ವತಾರೋಹಿಗಳ ತಂಡ ಪೂರ್ಣಗೊಳಿಸಿದೆ. ಇದರಲ್ಲಿ 'ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನೇರಿಂಗ್ ಅಂಡ್ ಅಡ್ವೆಂಚರ್ ಸ್ಪೋರ್ಟ್ಸ್' (NIMAS) ಸಂಸ್ಥೆಯ ತರಬೇತುದಾರರು ಮತ್ತು ವಿಶೇಷ ಸಾಹಸಿ ಸಿಬ್ಬಂದಿಗಳು ಸೇರಿದ್ದರು.
➤ NIMAS ಸಂಸ್ಥೆಯ ಕುರಿತು:
- ಪೂರ್ಣ ಹೆಸರು: National Institute of Mountaineering and Adventure Sports (NIMAS)
- ಸ್ಥಳ: ದಿರಾಂಗ್ (Dirang), ಅರುಣಾಚಲ ಪ್ರದೇಶ.
- ಆಡಳಿತಾತ್ಮಕ ನಿಯಂತ್ರಣ: ಭಾರತೀಯ ರಕ್ಷಣಾ ಸಚಿವಾಲಯ (Ministry of Defence).
- ವಿಶೇಷತೆ: ಕಳೆದ 3 ವರ್ಷಗಳಲ್ಲಿ NIMAS ಸಂಸ್ಥೆಯು ಪರ್ವತಾರೋಹಣ ರಂಗದಲ್ಲಿ ಸಾಧಿಸಿದ ಸತತ 3ನೇ ವಿಶ್ವದಾಖಲೆ ಇದಾಗಿದೆ
ಶನಿವಾರ, 26 ಸೆಪ್ಟೆಂಬರ್ 2026
10:21 ಪೂರ್ವಾಹ್ನ
Daily PDF
ಲಡಾಖ್ನಲ್ಲಿ ಹೊಸ ವಿಶ್ವದಾಖಲೆ: 23 ದಿನಗಳಲ್ಲಿ 20 ಶಿಖರಗಳನ್ನೇರಿದ ಸಾಹಸಿ ಪರ್ವತಾರೋಹಿಗಳ ಪಡೆ!
Authored by:
Yallamma G