* ಹಿರಿಯ ಐಪಿಎಸ್ ಅಧಿಕಾರಿ ನಳಿನ್ ಪ್ರಭಾತ್ ಅವರನ್ನು ದೇಶದ ಭಯೋತ್ಪಾದನಾ ನಿಗ್ರಹ ಪಡೆ ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ ಎಂದು ಸಿಬ್ಬಂದಿ ಇಲಾಖೆ ತಿಳಿಸಿದೆ.
* ಎನ್ಎಸ್‌ಜಿಯ ಪ್ರಧಾನ ನಿರ್ದೇಶಕರಾಗಿ ಅವರ ನೇಮಕವನ್ನು ಸಂಪುಟದ ನೇಮಕಾತಿ ಸಮಿತಿಯು (ಎಸಿಸಿ) ಅನುಮೋದನೆಗೊಳಿಸಿದೆ. ನಳಿನ್ ಪ್ರಭಾತ್ ಅವರು 2028ರ ಆಗಸ್ಟ್ 31ರವರೆಗೆ ಈ ಹುದ್ದೆಯಲ್ಲಿ ಇರಲಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
* ಪ್ರಭಾತ್ ಆಂಧ್ರಪ್ರದೇಶ ಕೇಡರ್‌ನ 1992 ರ ಬ್ಯಾಚ್ ಭಾರತೀಯ ಪೊಲೀಸ್ ಸೇವೆ (IPS) ಅಧಿಕಾರಿಯಾಗಿದ್ದು, ಪ್ರಸ್ತುತ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ನಲ್ಲಿ ಹೆಚ್ಚುವರಿ ಮಹಾನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
* ಕೇಂದ್ರ ಸರ್ಕಾರವು 1992 ರ ಬ್ಯಾಚ್‌ನ ಒಡಿಶಾ ಕೇಡರ್ ಐಪಿಎಸ್ ಅಧಿಕಾರಿ ಸಪ್ನಾ ತಿವಾರಿ ಅವರನ್ನು ಇಂಟೆಲಿಜೆನ್ಸ್ ಬ್ಯೂರೋ (ಐಬಿ) ಯ ವಿಶೇಷ ನಿರ್ದೇಶಕರನ್ನಾಗಿ ನೇಮಿಸಿದೆ.
* ಸಶಸ್ತ್ರ ಸೀಮಾ ಬಲ(ಎಸ್‌ಎಸ್‌ಬಿ)ದ ಮುಖ್ಯಸ್ಥ ದಲ್ಜಿತ್ ಸಿಂಗ್ ಚೌಧರಿ ಅವರು ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ)ಯ ಹೆಚ್ಚುವರಿ ಜವಾಬ್ದಾರಿಯನ್ನು ಹೊಂದಿದ್ದರು.
ಶನಿವಾರ, 20 ಎಪ್ರಿಲ್ 2024
11:20 ಪೂರ್ವಾಹ್ನ
Daily PDF
ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ಮುಖ್ಯಸ್ಥರಾಗಿ ನಳಿನ್ ಪ್ರಭಾತ್ ನೇಮಕ
Authored by:
Akshata Halli