* ವಿಶ್ವ ಪರಂಪರೆಯ ದಿನದ ಅಂಗವಾಗಿ ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಮೇಣದ ಪ್ರತಿಮೆಯನ್ನು ಏಪ್ರಿಲ್ 18 ರಂದು (ಗುರುವಾರ) ಅನಾವರಣಗೊಳಿಸಲಾಯಿತು.
* ಕೊಹ್ಲಿ ಮೇಲಿನ ಅಭಿಮಾನಕ್ಕೋಸ್ಕರ ಜೈಪುರದಲ್ಲಿ ಕೊಹ್ಲಿಯ ಮೇಣದ ಪ್ರತಿಮೆಯೊಂದನ್ನು ನಿರ್ಮಾಣ ಮಾಡಲಾಗಿದೆ. ಈ ಪ್ರತಿಮೆಯನ್ನು 35 ಕೆ.ಜಿ. ತೂಕದ ಕೊಹ್ಲಿ ಅವರ ಪ್ರತಿಮೆಯನ್ನು ಸುಮಾರು ಎರಡು ತಿಂಗಳಲ್ಲಿ ಕೆತ್ತಲಾಗಿದೆ.
* ಈ ಮ್ಯೂಸಿಯಂನಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರರಾದ ಸಚಿನ್ ತೆಂಡೂಲ್ಕರ್ ಮತ್ತು ಎಂ.ಎಸ್. ಧೋನಿ ಸಹಿತ 44 ಮಂದಿಯ ಮೇಣದ ಪ್ರತಿಮೆಗಳಿವೆ.
* ನಹರ್‌ಗಢ್ ಕೋಟೆಯ ಆವರಣದಲ್ಲಿ ನೆಲೆಗೊಂಡಿರುವ ಈ ವಸ್ತುಸಂಗ್ರಹಾಲಯವು ಮಹಾತ್ಮ ಗಾಂಧಿ, ಜವಾಹರ್ ಲಾಲ್ ನೆಹರು, ಎಪಿಜೆ ಅಬ್ದುಲ್ ಕಲಾಂ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಕಲ್ಪನಾ ಚಾವಾಲಾ, ಅಮಿತಾಭ್ ಬಚ್ಚನ್ ಮತ್ತು ಮದರ್ ತೆರೇಸಾ ಅವರ ಪ್ರತಿಮೆಗಳನ್ನು ಸಹ ಹೊಂದಿದೆ.
ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿ ಅವರ ಮೇಣದ ಪ್ರತಿಮೆ ಅನಾವರಣ
Published by Bhagya R K
20 ಏಪ್ರಿಲ್ 2024