* ಅಮೆರಿಕವು ದಶಕಗಳಷ್ಟು ಹಳೆಯದಾದ ಕೆಮಿಕಲ್‌ ಶಸ್ತ್ರಾಸ್ತ್ರಗಳ ದಾಸ್ತಾನನ್ನು ಸಂಪೂರ್ಣವಾಗಿ ನಾಶಪಡಿಸಿದೆ ಎಂದು ಜೋ ಬೈಡೆನ್‌ ಘೋಷಿಸಿದ್ದಾರೆ.
* ಅಮೆರಿಕ ಸೈನ್ಯ ಹೊಂದಿದ್ದ 500 ಟನ್ ಮಾರಣಾಂತಿಕ ಕೆಮಿಕಲ್‌ ಅಸಗಳ ಕೊನೆಯ ದಾಸ್ತಾನನ್ನು ನಾಶಪಡಿಸಿದ ಬಳಿಕ ಬೈಡೆನ್‌ ಈ ಹೇಳಿಕೆ ನೀಡಿದ್ದಾರೆ.
* ರಾಸಾಯನಿಕ ಶಸ್ತ್ರಾಸ್ತ್ರಗಳ ಸಮಾವೇಶದಲ್ಲಿ ತೆಗೆದುಕೊಂಡ ನಿರ್ಧಾರಕ್ಕೆ ಕೊನೆಯದಾಗಿ ಅಮೆರಿಕ ಸಹಿ ಹಾಕಲಾಗಿದ್ದು, ಅದರಂತೆ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ನಾಶಪಡಿಸಿದೆ ಎಂದು ತಿಳಿದುಬಂದಿದೆ.
* 1993ರಲ್ಲಿ ರಾಸಾಯನಿಕ ಶಸ್ತ್ರಾಸ್ತ್ರಗಳ ಸಮಾವೇಶದಲ್ಲಿ ಕೈಗೊಂಡ ನಿರ್ಧಾರದಂತೆ ಎಲ್ಲ ರಾಷ್ಟ್ರಗಳು ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ನಾಶಪಡಿಸಿದ್ದು, ಕೊನೆಯದಾಗಿ ಅಮೆರಿಕ ಪೂರ್ಣಗೊಳಿಸಿದೆ.