* ಸ್ವಾತಂತ್ರ್ಯ ದಿನಾಚರಣೆಯ ದಿನದಂದು ರಾಜ್ಯಗಳ ರಾಜ್ಯಧಾನಿಗಳಲ್ಲಿ ರಾಷ್ಟ್ರಧ್ವಜಾರೋಹಣ ಗೌರವ ದೊರೆತು 50 ವರ್ಷ ಪೂರ್ಣಗೊಂಡಿವೆ.
* ದೇಶಕ್ಕೆ ಸ್ವಾತ್ಯಂತ್ರ ದೊರೆತ 27 ವರ್ಷಗಳ ವರೆಗೆ ರಾಜ್ಯಗಳಲ್ಲಿ ಸ್ವಾತಂತ್ರ್ಯ ದಿನದಂದು ಮತ್ತು ಗಣರಾಜ್ಯದಿನದಂದು ತ್ರಿವರ್ಣ ಧ್ವಜಾರೋಹಣ ನೆರೆವೇರಿಸುವ ಅಧಿಕಾರ ಆಯಾ ರಾಜ್ಯಗಳ ರಾಜ್ಯಪಾಲರಿಗೆ ಇತ್ತು. 1974ರಲ್ಲಿ ಮುಖ್ಯಮಂತ್ರಿಗಳಿಗೆ ತ್ರಿವರ್ಣ ಧ್ವಜಾರೋಹಣ ನೆರೆವೇರಿಸುವ ಅಧಿಕಾರ ದೊರಕಿತು.
* ಮುಖ್ಯಮಂತ್ರಿಗಳಿಗೆ ಈ ಅವಕಾಶ ದೊರೆಯಲು ತಮಿಳುನಾಡಿನ ಆಗಿನ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರು ಕಾರಣರಾಗಿದ್ದಾರೆ. ತ್ರಿವರ್ಣ ಧ್ವಜಾರೋಹಣದ ಅವಕಾಶ ರಾಜ್ಯಪಾಲರಿಗೆ ಮಾತ್ರ ಇರುವುದು ಕರುಣಾನಿಧಿ ಅವರನ್ನು ಕೆರಳಿಸಿತ್ತು.
* ಈ ಕುರಿತು ಆಗಿನ ಪ್ರಧಾನಿ ಇಂದಿರಾಗಾಂಧಿ ಅವರಿಗೆ 1974ರ ಫೆಬ್ರುವರಿಯಲ್ಲಿ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ಜುಲೈನಲ್ಲಿ ಈ ಕುರಿತು ಆದೇಶ ಹೊರಡಿಸಿದ ಕೇಂದ್ರಸರ್ಕಾರ 'ಸ್ವಾತಂತ್ರ್ಯ, ದಿನಾಚರಣೆ ದಿನದಂದು ರಾಜ್ಯಗಳಲ್ಲಿ ಮುಖ್ಯಮಂತ್ರಿಯವರು ರಾಷ್ಟ್ರಧ್ವಜಾರೋಹಣ ಮಾಡಬೇಕು' ಎಂದು ಹೇಳಿತು. ಗಣರಾಜ್ಯೋತ್ಸವ ದಿನದಂದು ಈ ಗೌರವ ರಾಜ್ಯಪಾಲರ ಬಳಿಯೇ ಉಳಿಯಿತು. ಹೀಗಾಗಿ 50 ವರ್ಷಗಳ ಹಿಂದೆ ಮುಖ್ಯಮಂತ್ರಿಗಳು ಮೊದಲ ಬಾರಿಗೆ ತಮ್ಮ ರಾಜ್ಯಗಳ ರಾಜಧಾನಿಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದರು.
ರಾಜ್ಯಗಳಲ್ಲಿ ಮುಖ್ಯ ಮಂತ್ರಿಗಳಿಗೆ ರಾಷ್ಟ್ರ ಧ್ವಜಾರೋಹಣ ಗೌರವ ದೊರೆತು 50 ವರ್ಷ ಪೂರ್ಣ
Published by Akshata Halli
16 ಆಗಸ್ಟ್ 2024