* ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಅವರನ್ನು ನೇಮಕ ಮಾಡಲಾಗಿದೆ.
* ಕರ್ನಾಟಕ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್ ಅವರ ಅಧಿಕಾರಾವಧಿ ಜುಲೈ 31ಕ್ಕೆ ಮುಕ್ತಾಯವಾಗಲಿದ್ದು, ಪತಿ ರಜನೀಶ್ ಗೋಯೆಲ್ ನಿವೃತ್ತಿ ಬೆನ್ನಲ್ಲೇ ಪತ್ನಿ ಶಾಲಿನಿ ರಜನೀಶ್ ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಳ್ಳಲಿದ್ದಾರೆ. ಈ ಬಗ್ಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ಕೆ ಪಾಟೀಲ್ ಮಾಹಿತಿ ನೀಡಿದ್ದಾರೆ.
* ಈ ಮೂಲಕ ರಾಜ್ಯದ ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಣೆ ಮಾಡಿದ ದಂಪತಿ ಎಂಬ ಹೆಗ್ಗಳಿಕೆ ಶಾಲಿನಿ ರಜನೀಶ್ ಮತ್ತು ರಜನೀಶ್ ಗೋಯೆಲ್ ಪಾತ್ರರಾಗಿದ್ದಾರೆ.
* ಈ ಹಿಂದೆ ಬಿಕೆ ಭಟ್ಟಾಚಾರ್ಯ ಹಾಗೂ ತೆರೆಸಾ ಭಟ್ಟಾಚಾರ್ಯ ದಂಪತಿ ಮುಖ್ಯ ಕಾರ್ಯದರ್ಶಿ ಹುದ್ದೆ ಅಲಂಕರಿಸಿದ್ದರು.
* ಆಗಸ್ಟ್ 1 ರಿಂದ ಶಾಲಿನಿ ರಜನೀಶ್ ಅವರಿಗೆ ಮುಖ್ಯಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. 1989ರ ಬ್ಯಾಚ್‌ನ ಐಎಸ್‌ಎಸ್ ಅಧಿಕಾರಿಯಾಗಿರುವ ಶಾಲಿನಿ ಅವರ ಸೇವಾವಧಿ 2027ರ ಜೂನ್ 30ರವರೆಗೆ ಇರಲಿದೆ, ಮೂರು ವರ್ಷಗಳ ಕಾಲ ದೀರ್ಘಾವಧಿ ಸೇವೆಯಲ್ಲಿ ಮುಂದುವರಿಯಲು ಅವಕಾಶ ಕಲ್ಪಿಸಲಾಗಿದೆ.
* ಶಾಲಿನಿ ರಜನೀಶ್ ಅವರು ಈಗ ಅಭಿವೃದ್ಧಿ ಆಯುಕ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಅವರಿಗೆ ಜ್ಯೇಷ್ಠತೆಯ ಆಧಾರದ ಮೇಲೆ ಮುಂಬಡ್ತಿ ನೀಡಲಾಗಿದೆ.
ಶನಿವಾರ, 27 ಜುಲೈ 2024
10:45 ಪೂರ್ವಾಹ್ನ
Daily PDF
ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಶಾಲಿನಿ ರಜನೀಶ್ ನೇಮಕ
Authored by:
Yallamma G