* ಜಾಗತಿಕವಾಗಿ ಮನ್ನಣೆ ಪಡೆದಿರುವ ಕ್ಯೂಎಸ್ ವರ್ಲ್ಡ್ ಯುನಿವರ್ಸಿಟಿ ರ‍್ಯಾಂಕಿಂಗ್ ಪಟ್ಟಿ ಬಿಡುಗಡೆಯಾಗಿದ್ದು, ಜಾಗತಿಕವಾಗಿ ಟಾಪ್ ನೂರರಲ್ಲಿ ಭಾರತದ ಯಾವುದೇ ಸಂಸ್ಥೆಗಳಿಗೆ ಸ್ಥಾನ ಸಿಕ್ಕಿಲ್ಲ. ಆದರೆ ದೇಶದ ಟಾಪ್ ಸಂಸ್ಥೆಗಳಲ್ಲಿ ಐಐಟಿ ಬಾಂಬೆ ಅಗ್ರ ಸ್ಥಾನದಲ್ಲಿದ್ದು, ನಂತರದಲ್ಲಿ ಐಐಟಿ ದೆಹಲಿ ಹಾಗೂ ಮೂರನೇ ಸ್ಥಾನದಲ್ಲಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಇದೆ.
* ಏಷ್ಯಾದ ಉತ್ತಮ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಭಾರತದ ಹಲವು ಐಐಟಿಗಳು ಹಾಗೂ ಐಐಎಂಗಳು ಹಾಗೂ ಇತರ ರಾಷ್ಟ್ರೀಯ ಮಹತ್ವದ ಸಂಸ್ಥೆಗಳು ಹೆಸರು ಪಡೆದುಕೊಂಡಿವೆ. ಜಗತ್ತಿನ1500ಕ್ಕೂ ಅಧಿಕಶಿಕ್ಷಣಸಂಸ್ಥೆಗಳನ್ನು ಈಬಾರಿ ರ‍್ಯಾಂಕಿಂಗ್ ಗೆ ಪರಿಗಣಿಸಲಾಗಿದೆ.
* ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಗ್ರಸ್ಥಾನದಲ್ಲಿರೆ, ಲಂಡನ್‌ನ ಇಂಪೀರಿಯಲ್ ಕಾಲೇಜ್ ಎರಡನೇ ಸ್ಥಾನಕ್ಕೆಏರಿದೆ. 
* ದೇಶದ ಟಾಪ್ ಟೆನ್‌ ಸಂಸ್ಥೆಗಳು : 
- ಐಐಟಿ ಬಾಂಬೆ - 1ನೇ ಸ್ಥಾನ 
-  ಐಐಟಿ ದೆಹಲಿ - 2ನೇ ಸ್ಥಾನ 
- ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ - 3ನೇ ಸ್ಥಾನ 
- ಇಂಡಿಯನ್ ಇನ್‌ಸ್ಟಿಟ್ಯೂಟ್ ಟೆಕ್ನಾಲಜಿ ಖರಗಪುರ್ - 4ನೇ ಸ್ಥಾನ
- ಐಐಟಿ ಮದ್ರಾಸ್ - 5ನೇ ಸ್ಥಾನ 
- ಐಐಟಿ ಕಾನ್ಸುರ್ - 6ನೇ ಸ್ಥಾನ 
- ದೆಹಲಿ ಯುನಿವರ್ಸಿಟಿ - 7ನೇ ಸ್ಥಾನ 
- ಐಐಟಿ ರೂರ್ಕಿ - 8ನೇ ಸ್ಥಾನ 
- ಐಐಟಿ ಇಂದೋರ್ - 9ನೇ ಸ್ಥಾನ 
- ಐಐಟಿ ವಾರಾಣಸಿ - 10ನೇ ಸ್ಥಾನ.

* QS ವರ್ಲ್ಡ್ ಯುನಿವರ್ಸಿಟಿ ರ‍್ಯಾಂಕಿಂಗ್ ಪಟ್ಟಿಯಾ ಟಾಪ್ ವಿದ್ಯಾಲಯಗಳು : 
- ಅಮೆರಿಕದ ಮೆಸಾಚ್ಯುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) - 1ನೇ ಸ್ಥಾನ   
- ಇಂಪಿರಿಯಲ್ ಕಾಲೇಜ್ ಆಫ್ ಲಂಡನ್ - 2ನೇ ಸ್ಥಾನ
- ಆಕ್ಸ್‌ಫರ್ಡ್ ಯುನಿವರ್ಸಿಟಿ - 3ನೇ ಸ್ಥಾನ
- ಹಾರ್ವಡ್, ಕೇಂಬ್ರಿಜ್, ಸ್ಯಾನ್‌ಫೋರ್ಡ್, ಇಟಿಎಚ್ ಜೂರಿಚ್, ಸಿಂಗಾಪುರದ ನ್ಯಾಷನಲ್ ಯುನಿವರ್ಸಿಟಿ, ಯುನಿವರ್ಸಿಟಿ ಕಾಲೇಜ್ ಆಫ್ ಲಂಡನ್ ಹಾಗೂ ಕ್ಯಾಲಿಫೋರ್ನಿಯಾ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಟಾಪ್ ಟೆನ್ ಪಟ್ಟಿಯಲ್ಲಿವೆ. ಬಾಂಬೆ ಐಐಟಿಗೆ 118ನೇ ಸ್ಥಾನ   
* ಫಲಿತಾಂಶಗಳು 17.5m ಶೈಕ್ಷಣಿಕ ಪತ್ರಿಕೆಗಳ ವಿಶ್ಲೇಷಣೆ ಮತ್ತು 240,000 ಕ್ಕೂ ಹೆಚ್ಚು ಶೈಕ್ಷಣಿಕ ಅಧ್ಯಾಪಕರು ಮತ್ತು ಉದ್ಯೋಗದಾತರ ತಜ್ಞರ ಅಭಿಪ್ರಾಯಗಳನ್ನು ಆಧರಿಸಿ QS ವರ್ಲ್ಡ್ ಯುನಿವರ್ಸಿಟಿ ರ‍್ಯಾಂಕಿಂಗ್ ಪಟ್ಟಿಯನ್ನು ತಯಾರಿಸಲಾಗಿದೆ.