* ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನ ಮೂರನೇ ದಿನ ಭಾರತಕ್ಕೆ ಐದನೇ ಪದಕ ದಿನ ಲಭಿಸಿದ್ದು, ಕ್ರೀಡಾಕೂಟದ ಎರಡನೇ ದಿನ 1 ಚಿನ್ನ ಸೇರಿದಂತೆ 4 ಪದಕ ಗೆದ್ದಿದ್ದ ಭಾರತಕ್ಕೆ ಮೂರನೇ ದಿನ ಒಂದು ಕಂಚಿನ ಪದಕ ಸಿಕ್ಕಿದೆ.
* ಮಹಿಳೆಯರ 10 ಮೀಟರ್ ಏರ್ ರೈಫಲ್ ಎಸ್ಹೆಚ್ 1 ಫೈನಲ್‌ನಲ್ಲಿ ಭಾರತದ ರುಬಿನಾ ಫ್ರಾನ್ಸಿಸ್ 211.1 ಅಂಕ ಸಂಪಾಧಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಟರ್ಕಿಯ ಐಸೆಲ್ ಓಜ್ಗಾನ್, ರುಬಿನಾರನ್ನು ಹಿಂದಿಕ್ಕಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
* ಅಂತಿಮವಾಗಿ ರುಬಿನಾ ಅವರು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಇರಾನ್‌ನ ಸರೆಹ್ ಜವನ್‌ಮಾರ್ಡಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.
* ಮಹಿಳೆಯರ 10m ಏರ್ ಪಿಸ್ತೂಲ್ SH1 ಫೈನಲ್‌ನಲ್ಲಿ 2ನೇ ಹಂತದ ಎರಡು ಶಾಟ್‌ಗಳ ಐದನೇ ಸೆಟ್‌ನಲ್ಲಿ 9.5 ಮತ್ತು 9.8 ಶೂಟ್ ಮಾಡಿದ ನಂತರ ರುಬಿನಾ ಫ್ರಾನ್ಸಿಸ್ ಒಟ್ಟು 193.0 ನೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
* ರುಬಿನಾ ಫ್ರಾನ್ಸಿಸ್ ಗೆದ್ದ ಕಂಚಿನ ಪದಕ, ಶೂಟಿಂಗ್‌ನಲ್ಲಿ ಭಾರತಕ್ಕೆ ಸಿಕ್ಕ ನಾಲ್ಕನೇ ಪದಕ ಮತ್ತು ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಒಟ್ಟಾರೆ ಐದನೇ ಪದಕವಾಗಿದೆ. ವಾಸ್ತವವಾಗಿ ರುಬಿನಾ, ಪಿಸ್ತೂಲ್ ಶೂಟಿಂಗ್‌ನಲ್ಲಿ ಪ್ಯಾರಾಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ.
ಸೋಮವಾರ, 02 ಸೆಪ್ಟೆಂಬರ್ 2024
5:14 ಅಪರಾಹ್ನ
Daily PDF
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024: ಭಾರತಕ್ಕೆ ಐದನೇ ಪದಕ 10 ಮೀ. ಏರ್ ರೈಫಲ್ನಲ್ಲಿ ಕಂಚು ಗೆದ್ದ ರುಬಿನಾ ಫ್ರಾನ್ಸಿಸ್
Authored by:
Bhagya R K